ಹೈದರಾಬಾದ್: ತೆಲಂಗಾಣದ ಮಂಚಿರಿಯಾಲ್ ಜಿಲ್ಲೆಯಲ್ಲಿ ದಲಿತ ವ್ಯಕ್ತಿ ಮತ್ತು ಆತನ ಸ್ನೇಹಿತನನ್ನು ಶೆಡ್ ನಲ್ಲಿ ತಲೆಕೆಳಗಾಗಿ ನೇತುಹಾಕಿ ಕ್ರೂರವಾಗಿ ಹಿಂಸಿಸಿದ ಘಟನೆ ನಡೆದಿದೆ.
ಘಟನೆಗ ಸಂಬಂಧಿಸಿದಂತೆ ಪೊಲೀಸರು ಕೊಮುರಾಜುಲ ರಾಮುಲು, ಅವರ ಪತ್ನಿ ಸ್ವರೂಪ ಮತ್ತು ಪುತ್ರ ಶ್ರೀನಿವಾಸ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆ ಯತ್ನ ಮತ್ತು ದೌರ್ಜನ್ಯ ಎಸಗಿರುವ ಆರೋಪ ಹೊರಿಸಲಾಗಿದೆ.
ಇದನ್ನೂ ಓದಿ:Parliament ವಿಶೇಷ ಅಧಿವೇಶನಕ್ಕೂ ಮುನ್ನ ಖರ್ಗೆ ನೇತೃತ್ವದಲ್ಲಿ ಇಂಡಿಯಾ ಸಂಸದರ ಸಭೆ
ಶುಕ್ರವಾರ ಈ ಘಟನೆ ನಡೆದಿದ್ದು, ರಾಮುಲು ಅವರ ಮೇಕೆ ನಾಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಗೋಪಾಲಕ ತೇಜ ಮತ್ತು ಆತನ ದಲಿತ ಸ್ನೇಹಿತ ಚಿಲುಮುಲ ಕಿರಣ್ ಮೇಕೆಯನ್ನು ಕದ್ದಿರುವ ಶಂಕೆಯ ಮೇರೆಗೆ ಅವರನ್ನು ಶೆಡ್ ಗೆ ಕರೆಸಲಾಗಿತ್ತು. ಶೆಡ್ ನಲ್ಲಿ ರಾಮುಲು, ಅವರ ಪತ್ನಿ ಮತ್ತು ಮಗ ಅವರರನ್ನು ತಲೆಕೆಳಗಾಗಿ ನೇತುಹಾಕಿ ಥಳಿಸಿದ್ದಾರೆ.
ಕಿರಣ್ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ಳಂಪಲ್ಲಿ ಎಸಿಪಿ ಸದಯ್ಯ ಹಾಗೂ ಎಸ್‌ಎಸ್‌ಐ ಚಂದ್ರಕುಮಾರ್ ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.