Advertisement

ನಿಖರ ಸ್ಥಳ ಗುರುತಿಗೆ ಒಂದು ದೇಶ; ಒಂದು ವಿಳಾಸ

12:32 AM Nov 20, 2020 | mahesh |

ಹೊಸದಿಲ್ಲಿ: “ಒಂದು ದೇಶ; ಒಂದು ತೆರಿಗೆ’, “ಒಂದು ದೇಶ; ಒಂದು ಪಡಿತರ’ ಮಾದರಿಯಲ್ಲೇ ದೇಶಾದ್ಯಂತ “ಒಂದು ದೇಶ; ಒಂದು ವಿಳಾಸ’ ಯೋಜನೆ ಜಾರಿಗೆ ಬರಲಿದೆ. ಇದರಿಂದ ದೇಶದ ಪ್ರತೀ ರಸ್ತೆಯನ್ನೂ ಗುರುತಿಸುವುದು ಸುಲಭವಾಗಲಿದೆ.

Advertisement

ಉದ್ಯೋಗ ಸೃಷ್ಟಿ ಮತ್ತು ಕೌಶಲಾಭಿವೃದ್ಧಿ ಬಗ್ಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವ ಥಾವರ್‌ಚಂದ್‌ ಗೆಹಲೋಟ್‌ ನೇತೃತ್ವದ ಉನ್ನತಾಧಿಕಾರದ ಸಚಿವರ ಸಮಿತಿ ಪ್ರಧಾನಿ ಮೋದಿಯವರಿಗೆ ಈ ಬಗ್ಗೆ ವರದಿ ಸಲ್ಲಿಸಿದೆ. ಆಧಾರ್‌ ಸಂಖ್ಯೆಯಂತೆ ಪ್ರತೀ ಆಸ್ತಿ, ರಸ್ತೆಗೆ ವಿಶೇಷ ರೀತಿಯ ಸಂಕೇತ ಸಂಖ್ಯೆಗಳನ್ನು ನೀಡಲಾಗುತ್ತದೆ. ಅದರ ಆಧಾರದಲ್ಲಿ ಸುಲಭದಲ್ಲಿ ವಿಳಾಸ ಪತ್ತೆ ಸಾಧ್ಯವಾಗಲಿದೆ.

ವರದಿಯಲ್ಲಿ ಏನಿದೆ?
- ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳು ವ್ಯಾಪಕವಾಗಿ ಅಭಿವೃದ್ಧಿ ಗೊಳ್ಳುತ್ತಿವೆ. ಹೀಗಾಗಿ ಕೆಲವು ಪ್ರದೇಶಗಳು ಗುರುತಿಸುವಿಕೆಯಿಂದ ಹೊರಗೆ ಉಳಿಯುತ್ತವೆ.

- ಗ್ರಾಮ ಮತ್ತು ನಗರಗಳಲ್ಲಿ ಈಗಾಗಲೇ ಅಭಿ ವೃದ್ಧಿ ಹೊಂದಿದ ಪ್ರದೇಶಗಳ ರಸ್ತೆ ಗಳ ವಿವರಗಳನ್ನೇ ಹೊಸ ಪ್ರದೇಶಕ್ಕೆ ವಿಸ್ತರಿಸ ಲಾಗುತ್ತದೆ.

- ರಸ್ತೆ, ಕಟ್ಟಡ, ಪ್ರದೇಶಗಳನ್ನು ಗುರುತಿಸುವ ವ್ಯವಸ್ಥೆ ಇಲ್ಲದೇ ಇದ್ದರೆ ಅಭಿವೃದ್ಧಿಯಾಗುತ್ತಿರುವ ಸ್ಥಳದ ಗುರುತು ಹೇಗೆ ಸಾಧ್ಯ?

Advertisement

- ಅಪಘಾತದ ಸಂದರ್ಭದಲ್ಲಿ ಪೊಲೀಸರು, ಆ್ಯಂಬುಲೆನ್ಸ್‌ ಕ್ಲಪ್ತ ಸಮಯದಲ್ಲಿ ತಲುಪುವುದು ಹೇಗೆ? ಉಳಿದ ಸಂದರ್ಭದಲ್ಲಿ ಖಾಸಗಿ ಅಥವಾ ಸರಕಾರಿ ಸೇವೆಗಳನ್ನು ಆ ಪ್ರದೇಶಕ್ಕೆ ಕ್ಷಿಪ್ರವಾಗಿ ನೀಡುವುದೂ ಕಷ್ಟವಾಗುತ್ತದೆ.

- ಇದರ ಜತೆಗೆ ನಗರ, ಗ್ರಾಮೀಣ ವ್ಯಾಪ್ತಿ ಯಲ್ಲಿ ಸೂಕ್ತ ರೀತಿಯಲ್ಲಿ ತೆರಿಗೆ ಸಂಗ್ರಹಿಸಲೂ ಹೊಸ ವ್ಯವಸ್ಥೆ ನೆರವಾಗುತ್ತದೆ.

ಹೊಸ ವ್ಯವಸ್ಥೆ ಹೇಗೆ?
– ಸುಲಭವಾಗಿ ರಸ್ತೆ, ಕಟ್ಟಡ, ಪ್ರಮುಖ ಸ್ಥಳಗಳನ್ನು ಗುರುತಿಸಲು ವಿಶೇಷ ಸಂಕೇತ ಸಂಖ್ಯೆಗಳನ್ನು ನೀಡಲಾಗುತ್ತದೆ.

– ಅಕ್ಷರ ಮತ್ತು ಸಂಖ್ಯೆ (ಆಲ್ಫಾ ನ್ಯುಮರಿಕ್‌)ಗಳನ್ನು ರಸ್ತೆ, ಕಟ್ಟಡ, ಪ್ರಮುಖ ಸ್ಥಳಗಳಿಗೆ ನೀಡಲಾಗುತ್ತದೆ.

– ಹೊಸದಿಲ್ಲಿ ಮುನಿಸಿಪಲ್‌ ಕಾರ್ಪೊರೇಷನ್‌ ವ್ಯಾಪ್ತಿಯಲ್ಲಿ ಮತ್ತೂಂದು ರೀತಿಯಲ್ಲಿ ಸಂಕೇ ತಾ ಕ್ಷರಯುಕ್ತ ವಿಳಾಸ ವ್ಯವಸ್ಥೆಯನ್ನು ಪರೀಕ್ಷಾರ್ಥ  ಜಾರಿಗೊಳಿಸಲಾಗಿದೆ. ಮಹಾ ವೀರ ಶಿವಶಕ್ತಿ ಮಂದಿರ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಸಫ‌ªರ್‌ಜಂಗ್‌ ವಿಮಾನ ನಿಲ್ದಾಣ ರಸ್ತೆ, ಸತ್ಯ ಸದನ, ಹೊಸದಿಲ್ಲಿ- 110 003 ಎಂಬ ವಿಳಾಸವನ್ನು “ಎಸ್‌ಟಿಎಸ್‌ 100 138′ ಎಂದು ಗುರುತಿಸಬಹುದು.

ಎಲ್ಲೆಲ್ಲಿ ಪ್ರಯೋಗ?
-ಹೊಸದಿಲ್ಲಿ ಮುನಿಸಿಪಲ್‌ ಕಾರ್ಪೊರೇಷನ್‌
-ಭುವನೇಶ್ವರ ಮುನಿಸಿಪಲ್‌ ಕಾರ್ಪೊರೇಷನ್‌
-ಆಂಧ್ರಪ್ರದೇಶದ 110 ನಗರ ಸ್ಥಳೀಯ ಸಂಸ್ಥೆಗಳಲ್ಲಿ

1,125 ಕೋಟಿ ರೂ. ಯೋಜನೆಯ ಒಟ್ಟು ವೆಚ್ಚ
563 ಕೋಟಿ ರೂ. 2ನೇ ವರ್ಷ
562 ಕೋಟಿ ರೂ. ಮೊದಲ ವರ್ಷ
02 ಕೋಟಿ ಉದ್ಯೋಗ 5 ವರ್ಷಗಳಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next