ನವದೆಹಲಿ: ಕೇಂದ್ರ ಕ್ರೀಡಾ ಸಚಿವಾಲಯ ಸೋಮವಾರ 54 ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ಮುಂಬರುವ ಸೆಪ್ಟೆಂಬರ್ ತನಕ ಮಾನ್ಯತೆ ನೀಡಿದೆ. ಆದರೆ ಭಾರತೀಯ ಪ್ಯಾರಾಲಿಂಪಿಕ್ ಸಮಿತಿ (ಪಿಸಿಐ), ರೋವಿಂಗ್ ಫೆಡರೇಷನ್ ಆಫ್ ಇಂಡಿಯಾ (ಆರ್‌ಎಫ್ಐ, ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಜಿಎಫ್ಐ) ಸಂಸ್ಥೆಗಳಿಗೆ ಮತ್ತೂಮ್ಮೆ ಮಾನ್ಯತೆ ನೀಡುವುದನ್ನು ಸರ್ಕಾರ ತಿರಸ್ಕರಿಸಿದೆ.
ಭಾರತೀಯ ಪ್ಯಾರಾಲಿಂಪಿಕ್ ಸಮಿತಿ ಹಾಗೂ ರೋವಿಂಗ್ ಫೆಡರೇಷನ್ ಆಫ್ ಇಂಡಿಯಾ ಸಂಸ್ಥೆ ರಾಷ್ಟ್ರೀಯ ಕ್ರೀಡಾ ನೀತಿಯನ್ನು ಉಲ್ಲಂಘಿಸಿರುವುದರಿಂದ ಮಾನ್ಯತೆ ನೀಡಲಾಗಿಲ್ಲ. ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಆಡಳಿತ ದುರುಪಯೋಗದಿಂದಾಗಿ ಮಾನ್ಯತೆ ಪಡೆಯುವುದರಿಂದ ವಂಚಿತವಾಯಿತು.
ಇದೇ ವೇಳೆ ಕ್ರೀಡಾ ಸಚಿವಾಲಯದ ನಿರ್ಧಾರವನ್ನು ಭಾರತ ಒಲಿಂಪಿಕ್ಸ್ ಸಮಿತಿ ಅಧ್ಯಕ್ಷ ನರೇಂದ್ರ ಬಾತ್ರಾ ಪ್ರಶ್ನಿಸಿದ್ದಾರೆ. ಒಕ್ಕೂಟಗಳಿಗೆ ಮಾನ್ಯತೆಯನ್ನು ಸೆಪ್ಟೆಂಬರ್ ತನಕ ಮಾತ್ರ ಏಕೆ ನೀಡಿದ್ದು, ಡಿಸೆಂಬರ್ ತನಕ ನೀಡಬೇಕಿತ್ತು’ ಎಂದಿದ್ದಾರೆ. ಈ ಬಗ್ಗೆ ಕ್ರೀಡಾ ಸಚಿವಾಲಯ ಸದ್ಯಕ್ಕೆ ಯಾವ ಉತ್ತರವನ್ನೂ ನೀಡಿಲ್ಲ.