Advertisement

ಖ್ಯಾತ ಭೌತ ವಿಜ್ಞಾನಿ ಸ್ಟೀಫ‌ನ್‌ ಹಾಕಿನ್ಸ್‌ ಬಳಸುತ್ತಿದ್ದ ವೆಂಟಿಲೇಟರ್‌ ದಾನ

12:21 PM Apr 23, 2020 | Hari Prasad |

ಲಂಡನ್‌: ಬ್ರಿಟನ್‌ನ ಖ್ಯಾತ ಭೌತ ಶಾಸ್ತ್ರಜ್ಞ ಸ್ಟೀಫ‌ನ್‌ ಹಾಕಿನ್ಸ್‌ ಬಳಸುತ್ತಿದ್ದ ವೆಂಟಿಲೇಟರನ್ನು, ಅವರ ಕುಟುಂಬ ಸದಸ್ಯರು ಆಸ್ಪತ್ರೆಯೊಂದಕ್ಕೆ ದಾನ ನೀಡಿದ್ದಾರೆ.

Advertisement

ಕೋವಿಡ್ ಪೀಡೆಯ ಈ ಕಾಲಘಟ್ಟದಲ್ಲಿ ಅದು ಸದ್ಬಳಕೆಯಾಗಲೆಂಬ ಆಶಯದಿಂದ ಕೇಂಬ್ರಿಡ್ಜ್ ನ ರಾಯಲ್‌ ಪಾಪ್‌ವರ್ತ್‌ ಆಸ್ಪತ್ರೆಗೆ ದಾನ ಮಾಡಿರುವುದಾಗಿ ಹಾಕಿನ್ಸ್‌ ಅವರ ಪುತ್ರಿ ಲೂಸಿ ತಿಳಿಸಿದ್ದಾರೆ.

ಹಲವಾರು ದೈಹಿಕ, ಅಂಗವೈಕಲ್ಯಗಳೊಂದಿಗೆ ಸುದೀರ್ಘ‌ ಜೀವನ ಸವೆಸಿದ್ದ ಹಾಕಿನ್ಸ್‌, ತಮ್ಮ ಅಪರಿಮಿತ ಸಂಶೋಧನಾ ಸಾಮರ್ಥ್ಯದಿಂದ, ಶ್ರದ್ಧೆ, ಪ್ರತಿಭೆಗಳಿಂದ ಅಂತರಿಕ್ಷದ ಕಪ್ಪು ರಂಧ್ರಗಳ ಬಗ್ಗೆ ಅನೇಕಾನೇಕ ವಿಚಾರಗಳನ್ನು ಸಂಶೋಧಿಸಿ, ವಿಜ್ಞಾನ ಜಗತ್ತಿನಿಂದ ಸೈ ಎನ್ನಿಸಿಕೊಂಡಿದ್ದರು. 2018ರ ಮಾ. 14ರಂದು ಅವರು ನಿಧನ ಹೊಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next