Advertisement
ಮಂಗಳೂರಿನಿಂದ ಕಾರ್ಕಳ ಮಾರ್ಗವಾಗಿ ಕಡ್ತಲ ಕಡೆಗೆ ಸಂಚರಿಸುತ್ತಿದ್ದ ಎರಡು ಬೃಹತ್ ಕಂಟೈನರ್‌ಗಳು ಅಪಘಾತಕ್ಕೆ ಈಡಾಗಿದೆ. ಅ.2ರಂದು ಬೆಳಗ್ಗೆ ತೀರ್ಥೋಟ್ಟು ಸೇತುವೆ ದಾಟಿ ಕಂಟೈನರ್ ಹೋಗುತ್ತಿದ್ದಾಗ ಸ್ಥಗಿತ ಗೊಂಡಿತ್ತು. ಆಗ ಚಾಲಕ ಹಿಮ್ಮುಖ ಚಲಾಯಿಸಿದಾಗ ನಿಯಂತ್ರಣ ಕಳೆದುಕೊಂಡ ಕಂಟೈನರ್ ಹಿಂದಿನಿಂದ ಬರುತ್ತಿದ್ದ ಮತ್ತೂಂದು ಕಂಟೈನರ್‌ಗೆ ಢಿಕ್ಕಿ ಹೊಡೆದು ಎರಡೂ ಕಂಟೈನರ್‌ಗಳು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದವು. ಅಪಘಾತದಿಂದಾಗಿ ಹಿಂದಿನಿಂದ ಬರುತ್ತಿದ್ದ ಕಂಟೈನರ್‌ನ ಚಾಲಕನ ಕೈಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತೀ ವರ್ಷ ಮುಳುಗು ಸೇತು ವೆಯ ಸಮಸ್ಯೆಯಿಂದ ತೀರ್ಥೋಟ್ಟು ಸೇತುವೆ ಮುಳುಗಿ ಸಂಚಾರ ಸ್ಥಗಿತಗೊಳ್ಳುತ್ತಿತ್ತು. ಆದರೆ ಈ ಭಾರಿ ಬೃಹತ್ ಸೇತುವೆ ನಿರ್ಮಾಣಗೊಂಡು ಮುಳುಗು ಸೇತುವೆ ಸಮಸ್ಯೆ ಪರಿಹಾರ ಗೊಂಡಿತು. ಅಪಘಾñ ದಿಂದಾಗಿ ಮಂಗಳವಾರ ಸಂಚಾರ ಮತ್ತೆ ಸ್ಥಗಿತಗೊಂಡಿತ್ತು.
Related Articles
ಕಂಟೈನರ್‌ಗಳು ಸಂಜೆಯವರೆಗೂ ತೆರವುಗೊಳ್ಳದೆ ಇರುವುದನ್ನು ಮನಗಂಡ ಗ್ರಾಮ ಪಂಚಾಯತ್ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ ಅವರು ಬೃಹತ್ ಕ್ರೇನ್‌ಗಳನ್ನು ತರಿಸಿ ಕಂಟೈನರ್‌ಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಅಜೆಕಾರು ಪೊಲೀಸರಿಗೆ ಹಾಗೂ ಕಂಟೈನರ್‌ಗಳ ಮಾಲಕರಿಗೆ ಸೂಚಿಸಿ ದರು. ರಾತ್ರಿ ಏಳು ಗಂಟೆ ವಳೆ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
Advertisement