Advertisement

ಪ್ರವಾಸೋದ್ಯಮ ತಾಣ ಪಡುಬಿದ್ರಿ ಬೀಚ್‌ಗೆ ಪ್ರವೇಶ ನಿಷಿದ್ಧ

08:20 PM Mar 26, 2020 | Sriram |

ಪಡುಬಿದ್ರಿ: ನವ ಪ್ರವಾಸೋದ್ಯಮ ತಾಣವಾಗಿ ಗುರುತಿಸಿಕೊಂಡಿರುವ ಪಡುಬಿದ್ರಿ ಸಮುದ್ರ ಕಿನಾರೆಗೆ ಮಾ. 25ರಿಂದ ಕೊರೊನಾ 19 ವೈರಸ್‌ ನಿಯಂತ್ರಣದ ಸಲುವಾಗಿ ಪ್ರವೇಶವನ್ನು ನಿಷೇಧಿಸಲಾಗಿದೆ.

Advertisement

ಸ್ಥಳೀಯ ಯುವ ಸಂಸ್ಥೆಯೊಂದು ಈ ಕುರಿತಾದ ಸೂಚನೆಯೊಂದನ್ನು ಅಲ್ಲಿನ ಫಲಕವೊಂದರಲ್ಲಿ ಹಾಕಿ ಸ್ಥಳೀಯ ಮೊಗವೀರ ಗ್ರಾಮಗಳಾದ ಕಾಡಿಪಟ್ಣ ಮತ್ತು ನಡಿಪಟ್ಣ ನಾಗರಿಕರನ್ನು ಹೊರತುಪಡಿಸಿ ಇನ್ನಾರಿಗೂ ಪ್ರವೇಶವಿಲ್ಲ ಎಂಬುದಾಗಿ ಹೇಳಿದೆ.

ಸ್ವತ್ಛ ಪಡುಬಿದ್ರಿ ಬೀಚ್‌ನಲ್ಲಿ ವಿಹರಿಸಲು ನೂರಾರು ಪ್ರವಾಸಿಗರು ಪ್ರತಿನಿತ್ಯ ಆಗಮಿಸುತ್ತಿದ್ದರು. ವಾರಾಂತ್ಯದಲ್ಲಂತೂ ಸಹಸ್ರಾರು ಪ್ರವಾಸಿಗರನ್ನು ಪಡುಬಿದ್ರಿ ಬೀಚ್‌ ಆಕರ್ಷಿಸುತ್ತಿದೆ. ಜನಾಕರ್ಷಕ ತಾಣವಾಗಿ ಇಲ್ಲಿಗೆ ಹಲವಾರು ಕಾರು, ಬೈಕ್‌ಗಳಲ್ಲಿ ಜನರು ಬರುತ್ತಿದ್ದರು. ಹಾಗಾಗಿ ಇಲ್ಲಿ ಯಾವುದೇ ಅಂತರವಿಲ್ಲದೇ ಮನೆ ಮಂದಿ ವಿಹರಿಸುತ್ತಿದ್ದುದನ್ನು ಕಂಡು ಗ್ರಾಮಸ್ಥರೇ ಸ್ವಯಂ ತಮ್ಮ ಜಾಗೃತೆಗಾಗಿ ಒಟ್ಟಾಗಿ ಈಗ ಈ ಕ್ರಮವನ್ನು ಕೊರೊನಾ ಹಬ್ಬುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೈಗೊಂಡಿದ್ದಾರೆ. ಪಡುಬಿದ್ರಿ ಬೀಚ್‌ ಉಸ್ತುವಾರಿಗಾಗಿ ಈಗಾಗಲೇ ಇ- ಟೆಂಡರ್‌ಕರೆಯಲಾಗಿದೆ. ಎ. 4ರಂದು ಇದನ್ನು ತೆರೆಯಲಾಗುವುದು. ಅದು ವರೆಗೂ ಬೀಚ್‌ ನಿರ್ವಹಣೆಯನ್ನು ಕಾಪು ಸಾಯಿರಾಧಾ ಗ್ರೂಪ್ಸ್‌ ಸಂಸ್ಥೆಯೇ ನಿರ್ವಹಿಸುತ್ತಿದೆ ಎಂದು ಪ್ರವಾಸೋದ್ಯಮ ಇಲಾಖಾ ಸಹಾಯಕ ನಿರ್ದೇಶಕ ಚಂದ್ರಶೇಖರ್‌ ನಾಯ್ಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next