Advertisement
ಬೋಟ್ ತೆರಳಲು ಇಲಾಖೆಯ ಪಾಸ್ ವ್ಯವಸ್ಥೆ ಮತ್ತು ಕಾರ್ಮಿಕರ ಕೊರತೆಯಿಂದಾಗಿ ಯಾಂತ್ರೀಕೃತ ದೋಣಿಗಳು ನಿರೀಕ್ಷಿತ ಪ್ರಮಾಣದಲ್ಲಿ ಕಡಲಿಗೆ ಇಳಿದಿಲ್ಲ. ಇನ್ನು ಕೆಲವರು ಬೋಟುಗಳನ್ನು ತೆರವುಗೊಳಿಸಲು ಸಾಧ್ಯವಾಗದ ಹಿನ್ನೆಲೆ ಮತ್ತು ಮೇ 31ಕ್ಕೆ ಮೀನುಗಾರಿಕೆ ಋತು ಅಂತ್ಯಗೊಳ್ಳುವ ಕಾರಣದಿಂದಲೂ ಮೀನುಗಾರಿಕೆಗೆ ತೆರಳಲು ಮನಸ್ಸು ಮಾಡಿಲ್ಲ ಎನ್ನಲಾಗಿದೆ.
ಬಂದರಿನಲ್ಲಿ ಯಾಂತ್ರಿಕ ದೋಣಿಗಳಿಗೆ ಬೇಕಾಗುವಷ್ಟು ಮಂಜುಗಡ್ಡೆ ಸಿಗುತ್ತಿಲ್ಲ.ಕೆಲವು ಮಂಜುಗಡ್ಡೆ ಸ್ಥಾವರಗಳು ಮಾತ್ರ ಕಾರ್ಯನಿರ್ವಹಿಸುತ್ತಿರುವುದರಿಂದ ಕೊರತೆ ಉಂಟಾಗಿದೆ. ಲಾಕ್‌ಡೌನ್ ನಂತರ ದೋಣಿಗಳು ಮೀನುಗಾರಿಕೆಗೆ ತೆರಳದಿದ್ದರಿಂದ ಮತ್ತು ಕಾರ್ಮಿಕರ ಕೊರತೆಯಿಂದ ಬಹುತೇಕ ಸ್ಥಾವರಗಳು ಸ್ಥಗಿತಗೊಂಡಿವೆ.
ಬೆಳಗ್ಗೆ 5ರಿಂದ ಸಂಜೆ 5ರವರೆಗೆ ಇಲ್ಲಿ ಮೀನುಗಾರಿಕೆ ಚಟುವಟಿಕೆಗೆ ಅವಕಾಶ ನೀಡಲಾಗಿದ್ದು ಬೋಟು ಮಾಲಕರಿಗೆ, ಉಡುಪಿ ಜಿಲ್ಲೆಯೊಳಗಿನ ನಿಗದಿತ ಮಹಿಳಾ ಹಸಿಮೀನು ಮಾರಾಟಗಾರರಿಗೆ, ಒಣಮೀನು ಮಾರಾಟ ಮಹಿಳೆಯರಿಗೆ, ವ್ಯಾಪಾರಸ್ಥರಿಗೆ, ಫಿಶ್‌ಮೀಲ್, ಫೀÅಜಿಂಗ್ ಪ್ಲಾಂಟ್, ಮೀನು ಇಳಿಸುವವರು ಸೇರಿದಂತೆ ಕೆಲವೇ ವರ್ಗಕ್ಕೆ ಮಾತ್ರ ಪಾಸ್‌ಗಳನ್ನು ನೀಡಲಾಗಿದೆ.
Related Articles
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮೀನುಗಾರ ಸಂಘ ಪಾಸ್ ವ್ಯವಸ್ಥೆ ಮಾಡಿದೆ. ಎಲ್ಲರಿಗೂ ಪಾಸ್ ಕೊಡಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಪಾಸ್ ದುರುಪಯೋಗ, ನಿಯಮವನ್ನು ಉಲ್ಲಂಘನೆ ಮಾಡುವುದು ಕಂಡು ಬಂದಲ್ಲಿ ತತ್‌ಕ್ಷಣ ಮೀನುಗಾರಿಕೆ ಸ್ಥಗಿತಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗುವುದು.
– ಕೃಷ್ಣ ಎಸ್.ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರ ಸಂಘ
Advertisement
ಜೂನ್15ರವರೆಗೆ ಅವಕಾಶಕ್ಕಾಗಿ ಬೇಡಿಕೆಈ ಋತುವಿನಲ್ಲಿ 5 ತಿಂಗಳು ಮಾತ್ರ ಮೀನುಗಾರಿಕೆ ನಡೆದಿತ್ತು. ಜೂನ್ 30ರ ವರೆಗೆ ಹೆಚ್ಚುವರಿ ಅವಧಿ ಮೀನುಗಾರಿಕೆ ಅವಕಾಶ ನೀಡಬೇಕೆಂದು ಈಗಾಗಲೇ ಸರಕಾರಕ್ಕೆ ಒತ್ತಡವನ್ನು ತಂದಿದೇªವೆ. ಕನಿಷ್ಠ ಜೂ. 15ರವರೆಗಾದರೂ ಸರಕಾರ ನಮಗೆ ಅವಕಾಶ ನೀಡಬೇಕು.
-ಸುಭಾಸ್ ಮೆಂಡನ್,
ಮೀನುಗಾರ ಸಂಘದ ಕಾರ್ಯದರ್ಶಿ