Advertisement

ನಿರ್ದಿಷ್ಟ ಸ್ಥಳದಿಂದಲೇ ಜಿಲ್ಲೆಗೆ ಪ್ರವೇಶ: ಡಿಸಿ

04:29 AM May 12, 2020 | Suhan S |

ಧಾರವಾಡ: ಸೇವಾ ಸಿಂಧು ಪೋರ್ಟಲ್‌ ಮೂಲಕ ಜಿಲ್ಲೆಗೆ ಬರಲು ಹೆಸರು ನೋಂದಾಯಿಸಿಕೊಂಡವರಿಗೆ ಆಗಮನದ ದಿನಾಂಕ ಮತ್ತು ರಾಜ್ಯದ ನಿರ್ದಿಷ್ಟ ಸ್ಥಳದಲ್ಲಿ ಪ್ರವೇಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹೊರ ರಾಜ್ಯಗಳಿಂದ ಧಾರವಾಡ ಜಿಲ್ಲೆಗೆ ಆಗಮಿಸುವ ಜನರು ಕಡ್ಡಾಯವಾಗಿ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಸ್ಥಾಪಿಸಲಾಗಿರುವ ಕೇಂದ್ರದ ಮೂಲಕವೇ ಬರಬೇಕು. ಅಲ್ಲಿ ನೋಂದಣಿ ಮಾಡಿಕೊಂಡು, ಆರೋಗ್ಯ ತಪಾಸಣೆಗೆ ಒಳಪಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯಕ್ಕೆ ಬಂದ ನಂತರ ಹೋಟೆಲ್‌, ಆಸ್ಪತ್ರೆ, ಡಾರ್ಮಿಟರಿ ಮುಂತಾದ ಸೌಲಭ್ಯಗಳಲ್ಲಿ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಬೇಕು. ನಂತರ, ಕೋವಿಡ್‌-19 ಪರೀಕ್ಷಾ ಫಲಿತಾಂಶ ನಕಾರಾತ್ಮಕವಾಗಿ ಬಂದರೆ ಮಾತ್ರ ಮನೆಗೆ ಹೋಗಲು ಅನುಮತಿ ನೀಡಲಾಗುತ್ತದೆ.ನಾಡಿನ ಮತ್ತು ಕುಟುಂಬದ ಸದಸ್ಯರ ಸುರಕ್ಷತೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್‌ 19 ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ನಿಯಂತ್ರಣಕ್ಕೆ ಸಹಕರಿಸಿ :  ಚೆಕ್‌ಪೋಸ್ಟ್‌ ಮತ್ತು ತಪಾಸಣಾ ಕೇಂದ್ರಗಳಿಗೆ ಭೇಟಿ ನೀಡದೇ ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿ ನೇರವಾಗಿ ತಮ್ಮ ಮನೆಗಳಿಗೆ ತೆರಳಿರುವ ಜನರು ಕಂಡು ಬಂದರೆ, ನೆರೆಹೊರೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ, ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು.  ಸಹಾಯವಾಣಿ 1077ಕ್ಕೆ ಅಥವಾ ವಾಟ್ಸ್‌ಆ್ಯಪ್‌ ಸಂಖ್ಯೆಗಳಾದ 9449847641, 9449847646ಕ್ಕೆ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ಹೆಸರನ್ನು ಗುಪ್ತವಾಗಿ ಇಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಆರೋಗ್ಯ ಸೇತು: 6ನೇ ಸ್ಥಾನ :  ಆರೋಗ್ಯ ಸೇತು ಆ್ಯಪ್‌ ಬಳಕೆಯಲ್ಲಿ ಧಾರವಾಡ ಜಿಲ್ಲೆ 6ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಈ ವರೆಗೆ 58,10,813 ಜನರು ಈ ಆ್ಯಪ್‌ ಬಳಕೆ ಮಾಡುತ್ತಿದ್ದಾರೆ. ಈ ಬಳಕೆ ಆಧಾರದಡಿ ಟಾಪ್‌ ಟೆನ್‌ಪಟ್ಟಿಯಲ್ಲಿ ಧಾರವಾಡಕ್ಕೆ ಆರನೇ ಸ್ಥಾನಲಭಿಸಿದೆ. ಜಿಲ್ಲೆಯಲ್ಲಿ 1,91,884 ಜನರು ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಬಳಸುತ್ತಿದ್ದಾರೆ. ಒಂದನೇ ಸ್ಥಾನದಲ್ಲಿ ಬೆಂಗಳೂರು ಇದ್ದರೆ, ಕೊನೆ ಸ್ಥಾನದಲ್ಲಿ ಕೊಡಗು ಜಿಲ್ಲೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next