ಬೆಳ್ತಂಗಡಿ: ಪರಸ್ಪರ ಹೊಂದಾಣಿಕೆ ಹಾಗೂ ಚಲನೆ ಇಲ್ಲದಿದ್ದಲ್ಲಿ ನಿರಂತರ ಬೆಳವಣಿಗೆ ಅಸಾಧ್ಯ. ಜನಪ್ರತಿನಿಧಿಗಳು ನಿರಂತರ ಸಂಪರ್ಕದಲ್ಲಿದ್ದುಕೊಂಡು ಸಂಸ್ಥೆಯ ಧ್ಯೇಯೋದ್ದೇಶಗಳನ್ನರಿತು ಅದರ ಸಂಪೂರ್ಣ ಯಶಸ್ಸಿಗೆ ಸಹಕರಿಸಬೇಕು ಎಂದು ಉಜಿರೆ ಶ್ರೀ ಧ. ಮಂ. ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ| ಎಸ್.ಎನ್. ಕಾಕತ್ಕರ್ ಹೇಳಿದರು.
ಅವರು ಉಜಿರೆ ಶ್ರೀ ಧ.ಮಂ.ಪದವಿಪೂರ್ವ ಕಾಲೇಜಿನ ನೂತನ ತರಗತಿ ಪ್ರತಿನಿಧಿಗಳ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸ್ವಯಂಪ್ರೇರಿತ ಜವಾಬ್ದಾರಿ ನಿರ್ವಹಣೆಯನ್ನು ಮೈಗೂಡಿಸಿಕೊಂಡು ನಿರಂತರ ಹೊಸತನದ ಬಗ್ಗೆ ಹಾಗೂ ಕ್ರಿಯಾತ್ಮಕವಾಗಿ ಆಲೋಚಿಸಬೇಕೆಂದರು.
ಕಾಲೇಜಿನಲ್ಲಿ ಪ್ರಜಾಸತ್ತಾತ್ಮಕವಾದ ವಿಧಾನದ ಮೂಲಕ ಚುನಾವಣೆಗಳನ್ನು ನಡೆಸಿ ತರಗತಿ ಪ್ರತಿನಿಧಿಗಳನ್ನು ವಿದ್ಯಾರ್ಥಿಗಳೇ ಮತದಾನದ ಮೂಲಕ ಆಯ್ಕೆ ಮಾಡಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ| ಎನ್. ದಿನೇಶ್ ಚೌಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರತಿಜ್ಞಾವಿಧಿಯನ್ನು ಬೋಧಿಸಿ ಗುರುತಿನ ಚೀಟಿ ವಿತರಿಸಿ ಶುಭ ಹಾರೈಸಿದರು.
ತರಗತಿ ಪ್ರತಿನಿಧಿ ಅಭಿಷೇಕ್ ಪಿ.ಎ. ಸ್ವಾಗತಿಸಿ, ಪ್ರತ್ಯೂಷಾ ವಂದಿಸಿದರು. ವಿದ್ಯಾರ್ಥಿಗಳಾದ ಅರ್ಜುನ್ ಶೆಣೆ„ ಹಾಗೂ ನಿರೀûಾ ಕಾರ್ಯಕ್ರಮ ನಿರೂಪಿಸಿದರು.
ಉಪ ಪ್ರಾಚಾರ್ಯ ಪ್ರಮೋದ್ ಕುಮಾರ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಬೇಬಿ ಎನ್., ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ದಿವ್ಯಾ ಕುಮಾರಿ, ಹಿಂದಿ ವಿಭಾಗದ ಮುಖ್ಯಸ್ಥ ನಾಗರಾಜ್ ಬಿ. ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ತಿರುಮಲ ಪ್ರಸಾದ್ ಸಹಕರಿಸಿದರು.