Advertisement

ಜನರಿಂದ ಅಹವಾಲು ಸ್ವೀಕಾರ: ಸಮಸ್ಯೆಗೆ ಸ್ಪಂದಿಸುವ ಭರವಸೆ

01:14 PM Mar 03, 2022 | Team Udayavani |

ಗುರುಮಠಕಲ್‌: ಪ್ರತಿ ವಾರ್ಡ್‌ನ ಪುರಸಭೆ ಸದಸ್ಯರ ಸಮ್ಮುಖದಲ್ಲಿ ಸಮಸ್ಯೆಗಳನ್ನು ಆಲಿಸಿ ಸ್ಥಳೀಯರ ಆದ್ಯತೆ ಮೇರೆಗೆ ಯಾವುದೇ ಪಕ್ಷ ಭೇದವಿಲ್ಲದೆ ಅನುದಾನಗಳನ್ನು ಸೂಕ್ತವಾಗಿ ಬಳಸಿಕೊಳ್ಳುವಂತೆ ಜೆಡಿಎಸ್‌ ಮುಖಂಡ ಶರಣಗೌಡ ಕಂದಕೂರ ತಿಳಿಸಿದರು.

Advertisement

ಪಟ್ಟಣದ ವಾರ್ಡ್‌ ನಂ. 17 ಪಂಚಾತ್‌ಮೌಲ ಬಡಾವಣೆಯ ಜಿಂದಾ ಶಾಮುದರ್‌ ದರ್ಗ ಹತ್ತಿರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ವೇಗವಾಗಿ ಬೆಳೆಯುತ್ತಿರುವ ಪಟ್ಟಣದ ಅಗತ್ಯಕ್ಕೆ ತಕ್ಕಂತೆ ಮುಂಬರುವ ದಿನಗಳಲ್ಲಿ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು. ಸರಕಾರದ ಯೋಜನೆಗಳು ಮತ್ತು ಅನುದಾನಗಳ ಸದ್ಬಳಕೆಯಿಂದ ಜನರ ಸಮಸ್ಯೆ ನೀಗಿಸುವ ಕಾರ್ಯವನ್ನು ಶಾಸಕ ನಾಗನಗೌಡಕಂದಕೂರು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ಈಗಾಗಲೇ ಪಟ್ಟಣದ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗಾಗಿ ಸ್ಥಳಗಳನ್ನು ಗುರುತಿಸಲಾಗಿದೆ. ಶೀಘ್ರದಲ್ಲಿಯೇ ನಿವೇಶನ ರಹಿತ ಬಡವರಿಗೆ ಕಲ್ಪಿಸಲಾಗುವುದು. ಪ್ರತಿ ವಾರ್ಡ್‍ಗೆ ತಲಾ 10 ಲಕ್ಷ ರೂ.ಗಳಂತೆ ನಿಗದಿಪಡಿಸಲಾಗುವುದು ಎಂದರು.

ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಜಿ. ತಮ್ಮಣ್ಣ, ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಅವಂಟಿ, ಜೆಡಿಎಸ್‌ ಬ್ಲಾಕ್‌ ಅಧ್ಯಕ್ಷ ಪ್ರಕಾಶ ನೀರಟ್ಟಿ, ಎಪಿಎಂಸಿ ಸದಸ್ಯ ಅನಂತಪ್ಪ ಬೋಯಿನಿ, ಪುರಸಭೆ ಸದಸ್ಯರಾದ ಅನ್ವರ್‌ ಹೈಮದ್‌, ಆಶಣ್ಣ ಬುದ್ಧ, ರಘುನಾಥ್‌ರೆಡ್ಡಿ ಗವಿನೋಳ್‌, ಜ್ಞಾನೇಶ್ವರರೆಡ್ಡಿ, ರಾಜೇಶ್ವರರೆಡ್ಡಿ, ರಾಜೇಶ ಮಿನಸಪೂರ, ನರಸಪ್ಪ ಧನವಾಢ, ಪಾಶುಮಿಯ, ಬಾಬಾ ಚಿಂತಕುಂಟಿ, ಮುನೀರ್‌ ಹೈಮದ್‌, ಅಬ್ದಲ್‌ ಸಮ್ಮದ್‌, ಅಬ್ದುಲ್‌ ಜಫರ್‌, ಅಬ್ದುಲ್‌ ಸಮುದಾನಿ, ಸೈಯ್ಯದಲಿ, ಇರಫನ್‌, ಶಬ್ಬಿರ್‌ ಹೈಮದ್‌, ಮಹೇಶ್‌ಗೌಡ ಸೇರಿದಂತೆ ಜೆಡಿಎಸ್‌ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next