Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆ ಸವಾಲಾಗಿ ಸ್ವೀಕರಿಸಿ

05:24 AM Jun 12, 2020 | Lakshmi GovindaRaj |

ಕೊಳ್ಳೇಗಾಲ: ಸರ್ಕಾರ ಜೂನ್‌ 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಉದ್ದೇಶಿಸಿದ್ದು, ಅದನ್ನು ಸವಾಲಾಗಿ ಸ್ವೀಕರಿಸಿ ಪರೀಕ್ಷೆ ಯಶಸ್ವಿಗೊಳಿಸಲು ಪ್ರಯತ್ನಿಸುವು ದಾಗಿ ಶಾಸಕ ಎನ್‌.ಮಹೇಶ್‌ ಹೇಳಿದರು.

Advertisement

ಪಟ್ಟಣದ ಎಸ್ಸೆಸ್ಸೆಲ್ಸಿ  ಪರೀಕ್ಷಾ ಕೇಂದ್ರಗಳಾದ ಲಯನ್ಸ್‌ ಪ್ರೌಢಶಾಲೆ, ಸಂತ ಅಸಿಸಿ ಪ್ರೌಢಶಾಲೆ, ಎಸ್‌ ವಿಕೆ ಪ್ರೌಢಶಾಲೆ, ವಾಸವಿ ವಿದ್ಯಾಕೇಂದ್ರ, ಎಂಜಿಎಸ್‌ವಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರಿಗೆ ಹೇಳಿದರು. ಕೋವಿಡ್‌ 19 ವೈರಸ್‌ನಿಂದ ವಿದ್ಯಾರ್ಥಿಗಳಿಗೆ ತೊಂದರೆ ಯಾಗದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡು ನಿರ್ಭಯದಿಂದ ಪರೀಕ್ಷೆ ಬರೆಯಲು ಎಲ್ಲಾ ಸಿದತೆ ಮಾಡಲಾಗುವುದು.

ಪಟ್ಟಣದಲ್ಲಿ ಐದು ಪರೀಕ್ಷಾ  ಕೇಂದ್ರಗಳಿದ್ದು, ಪರೀಕ್ಷೆ ಎರಡು ದಿನಕ್ಕೂ ಮುಂಚಿತವಾಗಿ ಎಲ್ಲಾ ಕೊಠಡಿಗಳನ್ನು ಪರೀಕ್ಷಾ ಸಿಬ್ಬಂದಿ ನೇತೃತ್ವದಲ್ಲಿ ಶುದಟಛಿಪಡಿಸಲಾಗುವುದೆಂದು ಅವರು ಹೇಳಿದರು. ಪರೀಕ್ಷಾ ಕೇಂದ್ರಗಳಿಗೆ ಬರುವಾಗ ವಿದ್ಯಾರ್ಥಿಗಳ ನ್ನು ಕೇಂದ್ರದ  ಹೊರ ವಲಯದಲ್ಲಿ ಸ್ಕ್ರೀನಿಂಗ್‌ ಮಾಡಲಾಗುವುದು. ಪ್ರತಿಯೊಬ್ಬ ವಿದ್ಯಾರ್ಥಿಗೂ ಎರಡೆ ರಡು ಮಾಸ್ಕ್ಗಳನ್ನು ನೀಡಲಾಗುವುದು. ಬಿಸಿ ನೀರಿನ ಸೌಕರ್ಯ ಒದಗಿಸಲಾಗುವುದು.

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬರಲು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. ಪರೀಕ್ಷಾ ಶುಲ್ಕ ಮತ್ತು ದಾಖಲಾತಿ ಶುಲ್ಕವನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದು, ಹೆಚ್ಚು ಶುಲ್ಕ ಪಡೆದ ಪಕ್ಷದಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು  ಎಂದು ಎಚ್ಚರಿಸಿದರು. ತಹಶೀಲ್ದಾರ್‌ ಕೆ.ಕುನಾಲ್‌, ಬಿಇಒ ಚಂದ್ರಪಾಟೀಲ್‌, ಸಿಪಿಐ ಶ್ರೀಕಾಂತ್‌, ಎಸ್‌ಐ ರಾಜೇಂದ್ರ, ನಗರಸಭಾ ಆರೋಗ್ಯಾಧಿಕಾರಿ ಭೂಮಿಕಾ, ಪ್ರಾಂಶುಪಾಲ ಪ್ರಮೋದ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next