Advertisement

ತಪ್ಪನ್ನು ಒಪ್ಪಿ ತಿದ್ದಿಕೊಳ್ಳಿ

03:16 PM Dec 03, 2018 | |

ಮನುಷ್ಯ ಹುಟ್ಟಿನಿಂದ ಸಾಯುವ ತನಕ ಅದೆಷ್ಟೋ ತಪ್ಪುಗಳನ್ನು ಮಾಡಿರುತ್ತಾನೆ. ತಪ್ಪು ಮಾಡದೇ ಬದುಕಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ನಾವು ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳುವವರು ಎಷ್ಟು ಮಂದಿಯಿದ್ದಾರೆ. ಇದ್ದರೂ ತಮ್ಮ ತಪ್ಪುಗಳ ಅರಿವಾದ ಬಳಿಕವಾದರೂ ಅವುಗಳನ್ನು ಎಷ್ಟು ತಿದ್ದಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬುದೇ ಸದ್ಯದ ಪ್ರಶ್ನೆ.

Advertisement

ನಾನು, ನನ್ನದು, ನಾನೇ ಸರಿ ಎಂಬ ಅತಿಯಾದ ಅಹಂ ಭಾವನೆಯೇ ಎಷ್ಟೋ ಸಲ ನಮ್ಮ ತಪ್ಪನ್ನು ನಮ್ಮ ಅರಿವಿಗೆ ಬಾರದಂತೆ ತಡೆದುಬಿಡುತ್ತದೆ. ನಾವು ಮಾಡುವ ಕೆಲವು ತಪ್ಪುಗಳು ಪೆನ್ಸಿಲ್‌ನ ಬರೆಹವಾದರೆ ಇನ್ನು ಕೆಲವು ಪೆನ್ನಿನ ಬರೆಹ. ಪೆನ್ಸಿಲ್‌ನಲ್ಲಿ ಬರೆದಿದ್ದನ್ನು ಒರೆಸಲು ಹಿಂಬದಿ ರಬ್ಬರ್‌ ಇರುವಂತೆಯೇ ಕೆಲವು ತಪ್ಪುಗಳನ್ನು ಸರಿಪಡಿಸಿಕೊಳ್ಳಲು ನಮಗೆ ಅವಕಾಶಗಳಿರುತ್ತವೆ. ಆದರೆ ಇನ್ನು ಕೆಲವು ತಪ್ಪುಗಳಿಗೆ ಅಂತಹ ಸಾಧ್ಯತೆಗಳೇ ಇರುವುದಿಲ್ಲ. ಹಾಗಾದರೆ ಅಂತಹ ತಪ್ಪುಗಳು ನಮ್ಮಿಂದ ನಡೆದಲ್ಲಿ ಅದಕ್ಕೆ ಪರಿಹಾರವೇ ಇಲ್ಲವೇ ಎಂಬುದು ನಮ್ಮ ಸಂದೇಹ. ನಿಜ. ಅಂತಹ ತಪ್ಪುಗಳು ನಡೆದಾಗ ಅವುಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಆದರೆ ಅವು ಮತ್ತೆ ಮರುಕಳಿಸದಂತೆ ನಮ್ಮನ್ನು ನಾವು ಬದಲಾಯಿಸಿಕೊಳ್ಳಲು ಅವಕಾಶವಿದೆ.

ತಪ್ಪು ಮಾಡುವುದು ಪ್ರಕೃತಿ. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದು ಸಂಸ್ಕೃತಿ. ತಪ್ಪನ್ನು ತಿದ್ದುಕೊಂಡು ಮುನ್ನಡೆಯುವುದು ಪ್ರಗತಿ ಎಂಬುವುದು ದೊಡ್ಡವರ ಮಾತು. ಅದೆಷ್ಟೋ ಬಾರಿ ನಾವು ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ ಹಲವು ಸಂಬಂಧಗಳನ್ನು ಕಳೆದುಕೊಂಡಿರುತ್ತೇವೆ. ಅದು ಸ್ನೇಹವಾಗಿರಬಹುದು, ಪ್ರೇಮವಾಗಿರಬಹುದು ಅಥವಾ ಕರಳು ಸಂಬಂಧವೂ ಇರಬಹುದು. ಬಾಲ್ಯದಿಂದ ಮುಪ್ಪಿನವರೆಗೂ ನಾವು ತಪ್ಪುಗಳನ್ನು ಅರಿವಿಧ್ದೋ ಅಥವಾ ಇಲ್ಲದೆಯೋ ಮಾಡುತ್ತಲೇ ಇರುತ್ತೇವೆ. ತಪ್ಪು ಮಾಡದೆಯೇ ನಾನು ಬದುಕುತ್ತೇನೆ ಎಂಬುದು ಅಸಾಧ್ಯದ ಮಾತು. ಆದರೆ ಮಾಡಿದ ತಪ್ಪನ್ನು ಒಪ್ಪಿಕೊಂಡು, ತನ್ನನ್ನು ಬದಲಾಯಿಸಿ ಮುನ್ನಡೆಯುತ್ತೇನೆ ಎಂಬ ವಿಶ್ವಾಸವಿರಲಿ. ಇದು ಖಂಡಿತವಾಗಿಯೂ ಜೀವನದ ದಿಕ್ಕನ್ನೇ ಬದಲಾಯಿಸುವುದರಲ್ಲಿ ಸಂದೇಹವಿಲ್ಲ.

 ಪ್ರಸನ್ನ ಹೆಗಡೆ ಊರಕೇರಿ

Advertisement

Udayavani is now on Telegram. Click here to join our channel and stay updated with the latest news.

Next