Advertisement

ACCEA “Engineer’s Day”: ಅಭಿವೃದ್ಧಿ ಹಿಂದಿನ ಶಕ್ತಿ ಎಂಜಿನಿಯರ್‌: ಡಾ| ಸಭಾಹಿತ್‌

11:57 PM Sep 16, 2023 | Team Udayavani |

ಉಡುಪಿ: ಸಾವಿರಾರು ಮೂಲಸೌಕರ್ಯಗಳ ಅಭಿವೃದ್ಧಿಯ ಹಿಂದಿರುವ ಶಕ್ತಿ ಎಂಜಿನಿಯರ್‌ಗಳು. ಸರ್‌.ಎಂ. ವಿಶ್ವೇಶ್ವರಯ್ಯನವರು ಎಂಜಿನಿಯರ್‌ಗಳಿಗೆ ಮಾದರಿಯಾಗಿ ವೃತ್ತಿಗೆ ಗೌರವ ತಂದುಕೊಟ್ಟವರು. ಅವರ ಆದರ್ಶವನ್ನು ಪಾಲಿಸಿಕೊಂಡು ಗುಣಮಟ್ಟದ ಕಾಮಗಾರಿ ನಡೆಸಿ ಮೂಲಸೌಕರ್ಯ ಹಾಗೂ ರಾಷ್ಟ್ರ ನಿರ್ಮಾಣದ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಮಾಹೆ ವಿ.ವಿ. ಸಹ ಕುಲಪತಿ ಡಾ| ನಾರಾಯಣ ಸಭಾಹಿತ್‌ ಅಭಿಪ್ರಾಯಪಟ್ಟರು.

Advertisement

ಸಿವಿಲ್‌ ಎಂಜಿನಿಯರ್ ಆ್ಯಂಡ್‌ ಆರ್ಕಿಟೆಕ್ಟ್ (ಎಸಿಸಿಇಎ) ಅಸೋಸಿ ಯೇಶನ್‌ ಆಶ್ರಯದಲ್ಲಿ ಅಮೃತ್‌ ಗಾರ್ಡನ್‌ನಲ್ಲಿ ಶುಕ್ರವಾರ ನಡೆದ “ಎಂಜಿನಿಯರ್ ಡೇ’ ಉದ್ಘಾಟಿಸಿ ಅವರು ಮಾತನಾಡಿದರು.

ನಗರಸಭೆ ಪೌರಾಯುಕ್ತ ರಾಯಪ್ಪ ಮಾತನಾಡಿ, ಉಡುಪಿಯನ್ನು ಸ್ವಚ್ಛ, ಸುಂದರ ನಗರವನ್ನಾಗಿ ಮಾಡಲು ಎಂಜಿನಿಯರ್‌ಗಳ‌ ಪಾತ್ರ ಬಹು ಮುಖ್ಯ. ಅಧಿಕಾರಿಗಳು ಹಾಗೂ ಜನಸಾಮಾನ್ಯರ ಸಹಭಾಗಿತ್ವವೂ ಆವಶ್ಯ. ಕಟ್ಟಡ ನಿರ್ಮಿಸುವಾಗ ಪಾರ್ಕಿಂಗ್ ವ್ಯವಸ್ಥೆ ಅತೀ ಅಗತ್ಯ ಎಂದರು.

ಎಸಿಸಿಇಎ ಮಾಜಿ ಅಧ್ಯಕ್ಷ ಎಂ. ಗೋಪಾಲ ಭಟ್‌ ಅವರು, ಸರ್‌.ಎಂ.ವಿ. ಅವರ ಸಾರ್ಥಕ ಜೀವನ, ಕುರಿತು ಮಾಹಿತಿ ನೀಡಿದರು.

ಎಸಿಸಿಇಎ ಅಧ್ಯಕ್ಷ ಪಾಂಡುರಂಗ ಆಚಾರ್‌ ಕೆ. ಅಧ್ಯಕ್ಷತೆ ವಹಿಸಿ ದ್ದರು. ಎಸಿಸಿಇಎ ಖಜಾಂಚಿ ಲಕ್ಷ್ಮೀ ನಾರಾಯಣ ಉಪಾಧ್ಯ ಪಾಡಿಗಾರು, ಸದಸ್ಯೆ ಸಹನಾ ಉಪಸ್ಥಿತರಿದ್ದರು.

Advertisement

ಸರ್‌ ಎಂ.ವಿ. ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಲಾಯಿತು. ಅಮಿತ್‌ ಅರವಿಂದ್‌, ಜಗದೀಶ ಆಚಾರ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ| ಶ್ರೀನಾಥ ಶೆಟ್ಟಿ ನಿರೂಪಿಸಿ, ಎಸಿಸಿಇಎ ಕಾರ್ಯದರ್ಶಿ ಯೋಗೀಶ್ಚಂದ್ರಧರ ವಂದಿಸಿದರು.

ಸಮ್ಮಾನ-ಪ್ರೋತ್ಸಾಹಧನ ವಿತರಣೆ
ಎಸಿಸಿಇಎ ಗೌರವಾಧ್ಯಕ್ಷ ಎಂ. ಶ್ರೀನಾಗೇಶ್‌ ಹೆಗ್ಡೆ ದಂಪತಿಯನ್ನು ಗೌರವಿಸಲಾಯಿತು. ವುಡ್‌ವರ್ಕ್‌ ಗುತ್ತಿಗೆದಾರ ಗಂಗಾಧರ ಆಚಾರ್ಯ ಹೇರೂರು ದಂಪತಿ, ನಗರಸಭೆ ಪ್ಲಂಬಿಂಗ್‌ ಗುತ್ತಿಗೆದಾರ ಶೇಖ್‌ ಅನ್ವರ್‌ ದಂಪತಿ, ಡಾ| ನಾರಾಯಣ ಸಭಾಹಿತ್‌ ಅವರನ್ನು ಸಮ್ಮಾನಿಸಲಾಯಿತು. ಸರಕಾರಿ ಡಿಪ್ಲೊಮಾ ಕಾಲೇಜಿನ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳಾದ ಜಯಂತ್‌, ಶ್ರೀದೇವಿ ಅವರಿಗೆ ತಲಾ 15 ಸಾವಿರ ರೂ. ಪ್ರೋತ್ಸಾಹಧನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next