Advertisement

ಜೆಸ್ಕಾಂ ಲೆಕ್ಕಾಧಿಕಾರಿ ರಾಜು ಪತ್ತಾರ್ ಗೆ ಬೆಳಂಬೆಳಗ್ಗೆ ಎಸಿಬಿ ಶಾಕ್..!

08:54 AM Mar 09, 2021 | Team Udayavani |

ಯಾದಗಿರಿ: ನಗರದ ಸಹರಾ ಕಾಲೋನಿಯಲ್ಲಿರುವ ಪತ್ತಾರ್ ನಿವಾಸದ ಮೇಲೆ ಮಂಗಳವಾರ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Advertisement

ಆದಾಯ ಮೀರಿ ಆಸ್ತಿ ಹೊಂದಿದ್ದ ದೂರು ಹಿನ್ನೆಲೆಯಲ್ಲಿ ಜೆಸ್ಕಾಂ ಲೆಕ್ಕಾಧಿಕಾರಿ ರಾಜು ಪತ್ತಾರ್ ಮನೆ ಮೇಲೆ ಎಸ್ ಪಿ ಮಹೇಶ್ ಮೇಗಣ್ಣನವರ್ ಹಾಗೂ ಡಿವೈಎಸ್ಪಿ ಉಮಾಶಂಕರ ನೇತೃತ್ವದಲ್ಲಿ ಎಸಿಬಿ ಅಧಿಕಾರಿಗಳು ಬೆಳಿಗ್ಗೆ 6:30 ರ ಸುಮಾರಿಗೆ ದಾಳಿ ನಡೆಸಿ ಪರಿಶೀಲನೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಬ್ರಿಟನ್‌ ರಾಜಮನೆತನದ ಅಸಲಿ ಮುಖ ಬಿಚ್ಚಿಟ್ಟ ಪ್ರಿನ್ಸ್‌ ಹ್ಯಾರಿ ಮತ್ತು ಮೆಘನ್‌ ಮಾರ್ಕೆಲ್‌

ಕಳೆದ 20 ವರ್ಷದಿಂದ ಅಧಿಕಾರಿ ರಾಜು ಪತ್ತಾರ್ ಯಾದಗಿರಿ ಜೆಸ್ಕಾಂ ಕಚೇರಿಯಲ್ಲಿ ‌ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.

ನಗದು ಹಣ, ಚಿನ್ನಾಭರಣ ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ದಾಖಲೆ ಪರಿಶೀಲನೆ ನಡೆಯುತ್ತಿದೆ.  ದಾಳಿ ವೇಳೆ ಮನೆಯಲ್ಲಿ ಇರುವ ಅಧಿಕಾರಿ ಪತ್ತಾರ ಕುಟುಂಬದವರೊಂದಿಗೆ ಮನೆಯಲ್ಲಿಯೇ ಇದ್ದಾರೆ.

Advertisement

ಪಿಐ ಗುರುಪಾದ ಬಿರಾದಾರ, ಶರಣಬಸವ, ಬಾಬಾ ಸಾಹೇಬ ಪಾಟೀಲ್ ಹಾಗೂ ಸಿಬ್ಬಂದಿ ವಿಜಯ್ ಕುಮಾರ್, ಗುತ್ತಪ್ಪಗೌಡ, ಅಮರ್ ನಾಥ್, ಮಲ್ಲಪ್ಪ, ಪ್ರಕಾಶ್ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಯಲ್ಲಾಪುರ : ಕೆಲಸ ಮಾಡುತ್ತಿದ್ದ ವೇಳೆ ಮಣ್ಣು ಕುಸಿದು ನಾಲ್ವರ ಸಾವು

Advertisement

Udayavani is now on Telegram. Click here to join our channel and stay updated with the latest news.

Next