Advertisement

ಹುಬ್ಬಳ್ಳಿಯಲ್ಲಿ ACB ಬೇಟೆ: ಲಕ್ಷಾಂತರ ರೂ. ಮೌಲ್ಯದ ಗರಿ ಗರಿ ನೋಟು, ಚಿನ್ನಾಭರಣ ಪತ್ತೆ

03:17 PM Feb 02, 2021 | Team Udayavani |

ಹುಬ್ಬಳ್ಳಿ: ನೀರಾವರಿ ಇಲಾಖೆ ಇಇ ದೇವರಾಜ ಶಿಗ್ಗಾಂವಿ ಅವರ ಬ್ಯಾಂಕ್ ಲಾಕರ್ ಓಪನ್ ಮಾಡಲಾಗಿದ್ದು, ಲಕ್ಷಾಂತರ ರೂ. ನಗದು, ಚಿನ್ನಾಭರಣ ಪತ್ತೆಯಾಗಿದೆ ಎಂದು ವರದಿಯಾಗಿದೆ.

Advertisement

ಬ್ಯಾಂಕ್ ಲಾಕರ್ ನಲ್ಲಿ ಲಕ್ಷಾಂತರ ರೂ.  ಮೌಲ್ಯದ 500ರೂ. ಮುಖಬೆಲೆಯ ಗರಿ ಗರಿ ನೋಟುಗಳು ಪತ್ತೆ‌ಯಾಗಿದೆ. ಇಂಡಿಯನ್ ಓವರ್ ಸಿಸ್ ಬ್ಯಾಂಕ್ ನಲ್ಲಿ 56.50 ಲಕ್ಷ ರೂ. ನಗದು ಹಾಗೂ ಅರ್ಧ ಕೆಜಿ ಚಿನ್ನಾಭರಣ ಪತ್ತೆಯಾಗಿದೆ. ಪತ್ನಿ, ಅಳಿಯನ ಹೆಸರಿನಲ್ಲಿ ಬ್ಯಾಂಕ್ ಲಾಕರ್‌ ಹೊಂದಲಾಗಿದೆ ಎಂದು ಹೇಳಲಾಗುತ್ತಿದೆ.

ಇದಕ್ಕೂ ಮೊದಲು ಗೋಕುಲ ರಸ್ತೆ ಕೋಟಿಲಿಂಗನಗರ ಎಂ.ಸಿ. ಪಾಟೀಲ ಬಡಾವಣೆ ಮಲ್ಲಿಕಾರ್ಜುನ ಉದ್ಯಾನವನ ಬಳಿಯ ದೇವರಾಜ ಶಿಗ್ಗಾವಿ ಅವರ ತಾಯಿಯು ಪರಸ್ಥಳಕ್ಕೆ ತೆರಳಿದ್ದು, ಅವರ ಬರುವಿಕೆಗಾಗಿ ಎಸಿಬಿ ಅಧಿಕಾರಿಗಳು ಸ್ಥಳದಲ್ಲೇ ಮುಕ್ಕಾಂ ಹೂಡಿದ್ದರು.

ಇದನ್ನೂ ಓದಿ:  “ಮಹಾ ಯಡವಟ್ಟು”: 12 ಮಕ್ಕಳಿಗೆ ಪೋಲಿಯೋ ಲಸಿಕೆ ಬದಲು ಸ್ಯಾನಿಟೈಸರ್: ಮಕ್ಕಳು ಅಸ್ವಸ್ಥ

Advertisement

ಬಳ್ಳಾರಿಯಲ್ಲಿ  ವಿಮ್ಸ್  ಮಾಜಿ ನಿರ್ದೇಶಕ ಶ್ರೀನಿವಾಸ ಮನೆ ಮೇಲೂ  ಎಸಿಬಿ ದಾಳಿ ನಡೆದಿದ್ದು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.  ವಿಮ್ಸ್ ನಿರ್ದೇಶಕರಾಗಿ  ಬಳ್ಳಾರಿಯಲ್ಲಿ ಸೇವೆ ಸಲ್ಲಿಸಿದ್ದ ಶ್ರೀನಿವಾಸ ಅವರು, ಸದ್ಯ ಕೊಪ್ಪಳದ ಔಷಧ ವಿಭಾಗದ ಹೆಚ್.ಓ. ಡಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಂದು ಮುಂಜಾನೆಯಿಂದಲೇ ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಎಸಿಬಿ ದಾಳಿ ನಡೆದಿದೆ. ಈ ವೇಳೆ ನಗದು, ಚಿನ್ನಾಭರಣ ಸೇರಿದಂತೆ ಹಲವು ಅಕ್ರಮ ಸಂಪತ್ತು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:   ತ್ರಿಪುರಾ-ಬಾಂಗ್ಲಾ ಗಡಿಯಲ್ಲಿ ಗೋ ಕಳ್ಳ ಸಾಗಣೆ, ಬಿಎಸ್ ಎಫ್ ಮೇಲೆ ಹಲ್ಲೆ: ಗುಂಡಿನ ದಾಳಿ

Advertisement

Udayavani is now on Telegram. Click here to join our channel and stay updated with the latest news.

Next