Advertisement

ಎಸಿಬಿ ದಾಳಿ: ಲಂಚ ಸ್ವೀಕರಿಸುತ್ತಿದ್ದ ಇಬ್ಬರ ಬಂಧನ

06:45 AM Jul 20, 2017 | Team Udayavani |

ಪುತ್ತೂರು : ಹೊಸದಾಗಿ ಸಹಕಾರ ಸಂಘ ನೋಂದಣಿಗೆ ಅರ್ಜಿ ಸಲ್ಲಿಸಿದ ವ್ಯಕ್ತಿಯೊಂದಿಗೆ ಲಂಚ ಸ್ವೀಕರಿಸುತ್ತಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಮತ್ತು ಚಾಲಕನನ್ನು ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ಘಟನೆ ಬುಧವಾರ ಸಂಜೆ ಸಂಭವಿಸಿದೆ.

Advertisement

ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆ.ಮಂಜುನಾಥ್‌ ಮತ್ತು ಚಾಲಕ ರಾಧಾಕೃಷ್ಣ ಅವರು ಲಂಚ ಸ್ವೀಕಾರ ಮಾಡಿದವರು. ಪಟ್ನೂರಿನ ವ್ಯಕ್ತಿಯೋರ್ವರು ಹೊಸದಾಗಿ ಸಹಕಾರ ಸಂಘ ಮಾಡುವ ಕುರಿತು ಅರ್ಜಿ ಸಲ್ಲಿಸಿದ್ದರು. 

ಆದರೆ ಅದಕ್ಕೆ ಅನುಮತಿ ನೀಡಬೇಕಾದರೆ 25,000 ರೂ. ನೀಡುವಂತೆ ಡಿಮಾಂಡ್‌ ಇಟ್ಟಿದ್ದರು. ಈ ವಿಚಾರವನ್ನು ಅರ್ಜಿದಾರ ಭ್ರಷ್ಟಾಚಾರ ನಿಗಹದಳದ ಗಮನಕ್ಕೆ ತಂದಿದ್ದರು. ಪೂರ್ವಯೋಜಿತ ದಾಳಿ ನಡೆಸಿದ ಅಧಿಕಾರಿಗಳು, ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ದಿಢೀರ್‌ ದಾಳಿ ನಡೆಸಿ ಈ ಇಬ್ಬರನ್ನು ಬಂಧಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹದಳದ ಇನ್ಸ್‌ಪೆಕ್ಟರ್‌ ಯೋಗೀಶ್‌ ನೇತೃತ್ವದ ಅಧಿಕಾರಿಗಳು ದಾಳಿ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next