Advertisement

ಎಸಿ ಬಸ್‌ಗಳ ಕಾರ್ಯಾಚರಣೆ

11:32 AM Jun 25, 2020 | Suhan S |

ಧಾರವಾಡ: ಕೋವಿಡ್‌-19 ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಸಾರಿಗೆ ಸಂಸ್ಥೆಯ ಎಸಿ ಬಸ್‌ಗಳ ಕಾರ್ಯಾಚರಣೆಯನ್ನು ಸರ್ಕಾರದ ಅನುಮತಿ ಮೇರೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಆರಂಭಿಸಲಾಗುತ್ತಿದೆ.

Advertisement

ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಜೂ.25 ಜಾರಿಗೆ ಬರುವಂತೆ ಹಂತ ಹಂತವಾಗಿ ಎಸಿ ಬಸ್‌ಗಳ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಪ್ರಸ್ತುತ ಹಂತದಲ್ಲಿ ಎಸಿ ಬಸ್‌ ಸೇವೆಗಳನ್ನು ವಾ.ಕ.ರ.ಸಾ.ಸಂಸ್ಥೆಯ ವ್ಯಾಪ್ತಿಯ ವಿವಿಧ ಸ್ಥಳಗಳಿಂದ ಬೆಂಗಳೂರು, ಮೈಸೂರು ಸ್ಥಳಗಳಿಗೆ ಮತ್ತು ಆ ಸ್ಥಳಗಳಿಂದ ಸಾರಿಗೆ ಕಾರ್ಯಾಚರಣೆ ಮಾಡಲಾಗುತ್ತಿದೆ. ಬಸ್ಸಿನೊಳಗಿನ ತಾಪಮಾನವನ್ನು ಸರ್ಕಾರದ ಮಾರ್ಗಸೂಚಿಗಳನ್ವಯ 24-25 ಡಿಗ್ರಿ ಸೆಲ್ಸಿಯಸ್‌ನಲ್ಲಿ ನಿರ್ವಹಿಸಲಾಗುತ್ತದೆ. ಇದಲ್ಲದೆ, ಕೋವಿಡ್‌-19 ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ, ರಾತ್ರಿ ಸೇವಾ ಬಸ್‌ಗಳಲ್ಲಿ ಯಾವುದೇ ರೀತಿಯ ಹೊದಿಕೆ ನೀಡಲಾಗಲ್ಲ. ಪ್ರಯಾಣಿಕರು ತಮ್ಮ ಸ್ವಂತ ಹೊದಿಕೆ ಬಳಸಿಕೊಳ್ಳಲು ಕೋರಲಾಗಿದೆ. ಪ್ರಯಾಣಿಕರು ಆನ್‌ಲೈನ್‌ ನಲ್ಲಿ ಮುಂಚಿತವಾಗಿ www.ksrtc.in ನಲ್ಲಿ ಸೇವೆಗಳಿಗಾಗಿ ಸಂಸ್ಥೆಯ ಫ್ರಾಂಚೈಸೀ ಮತ್ತು ಮುಂಗಡ ಕಾಯ್ದಿರಿಸುವಿಕೆ ಕೌಂಟರ್‌ಗಳ ಮೂಲಕ ಟಿಕೇಟ್‌ ಕಾಯ್ದಿರಿಸಬಹುದು. ಪ್ರಯಾಣಿಕರು ಮೇಲಿನ ಸೌಲಭ್ಯ ಪಡೆಯಬಹುದಾಗಿದೆ ಎಂದು ಹುಬ್ಬಳ್ಳಿಯ ವಾಕರಸಾ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next