Advertisement

ಡ್ರಗ್ಸ್‌ ದಂಧೆ ತಡೆಗೆ ಎಬಿವಿಪಿ ಆಗ್ರಹ

05:16 PM Sep 04, 2020 | Suhan S |

ಬೆ‌ಳಗಾವಿ: ಮಾದಕ ಪದಾರ್ಥಗಳ ವ್ಯವಹಾರದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ರಾಜ್ಯದಲ್ಲಿ ಮಾದಕ ಪದಾರ್ಥಗಳ ಜಾಲ ದೊಡ್ಡಮಟ್ಟದಲ್ಲಿ ವ್ಯಾಪಿಸಿದೆ.ಕನ್ನಡ ಚಲನಚಿತ್ರ ರಂಗದ ನಟ-ನಟಿಯರು, ಪ್ರಭಾವಿಗಳು ಹಾಗೂ ರಾಜಕಾರಣಿಗಳ ಮಕ್ಕಳು ಇದರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಶಾಲಾ- ಕಾಲೇಜುಗಳಲ್ಲೂ ಸಹ ಇದರ ದಂಧೆ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಕಾರಣದಿಂದ ಇದರ ವ್ಯವಹಾರ ಹಾಗೂ ಜಾಲದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸಿ ಶಿಸ್ತುಕ್ರಮ ಜರುಗಿಸಬೇಕು. ಇದನಿಯಂತ್ರಣಕ್ಕಾಗಿ ಕಠಿಣ  ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.

ಎಬಿವಿಪಿ ಮಹಾನಗರ ಘಟಕದ ಕಾರ್ಯದರ್ಶಿ ಕಿರಣ ದುಕಾನದಾರ್‌, ರೋಹಿತ್‌ ಉಮನಾಬಾದಿಮಠ, ಅಶ್ವಿ‌ನಿ ಕಂಚಿ, ಎಸ್‌.ಕಾರ್ತಿಕ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ : ಬೈಲಹೊಂಗಲ: ಡ್ರಗ್ಸ್‌ ದಂಧೆ ಹಿಂದಿರುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಆಗ್ರಹಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತರು ಉಪವಿಭಾಗಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.

ಸ್ಯಾಂಡಲ್‌ವುಡ್‌ನೊಂದಿಗೆ ನಂಟಿರುವ ಡ್ರಗ್ಸ್‌ ಜಾಲವನ್ನು ಎನ್‌ಸಿಬಿ ಅಧಿಕಾರಿಗಳು ಬೇಧಿ ಸಿದ್ದು, ಪ್ರತಿಷ್ಠಿತ ಶ್ರೀಮಂತ ಕುಟುಂಬದ ವ್ಯಕ್ತಿಗಳು, ಸಿನಿಮಾ ನಟ-ನಟಿಯರು, ರಾಜಕಾರಣಿ ಮಕ್ಕಳು ಇದರ ಹಿಂದೆ ಇರುವ ಬಗ್ಗೆ ಆರೋಪ ಕೇಳಿ ಬರುತ್ತಿವೆ. ಡ್ರಗ್ಸ್‌ ಜಾಲದ ಪಿಡುಗಿನಿಂದ ದೇಶದ ಯುವಶಕ್ತಿಯನ್ನು ರಕ್ಷಿಸಲು ಡ್ರಗ್ಸ್‌ ಜಾಲವನ್ನು ಬುಡ ಸಮೇತ ನಿರ್ಮೂಲನೆ ಮಾಡಲು ರಾಜ್ಯ ಸರಕಾರ ಪ್ರಯತ್ನಿಸಬೇಕು.

Advertisement

ರಾಜ್ಯದ ಕೆಲ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್‌ ಜಾಲ ವ್ಯವಸ್ಥಿತವಾಗಿ ಕೋಡ್‌ ವರ್ಡ್‌ಗಳ ಮೂಲಕ ಈ ದಂಧೆ ನಡೆಸುತ್ತಿದೆ. ಇದರಿಂದ ಕಾಲೇಜಿನಲ್ಲಿ ಡ್ರಗ್ಸ್‌ಗೆ ದಾಸರಾಗಿದ್ದು, ಇದು ಒಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿ, ಒಂದು ರೀತಿಯ ಪ್ಯಾಶನ್‌ ಆಗಿ ಯುವಕರಲ್ಲಿ ಬೆಳೆಯುತ್ತಿದೆ. ಈ ಜಾಲದ ಹಿಂದಿರುವ ಪ್ರಭಾವಿಗಳ ಹಸ್ತಕ್ಷೇಪ, ಒತ್ತಡಕ್ಕೆ ಮಣಿಯದೆ ಪೊಲೀಸ್‌ ಇಲಾಖೆ ಸಂಪೂರ್ಣ ಸ್ವತಂತ್ರವಾಗಿ ತನಿಖೆ ನಡೆಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಜಿಲ್ಲಾ ಸಂಚಾಲಕ ಸಿದ್ಧಾರೂಢ

ಹೊಂಡಪ್ಪನ್ನವರ, ತಾಲೂಕು ಸಂಚಾಲಕ ಅಪ್ಪಣ್ಣ ಹಡಪದ, ಸಚಿನ ತಲ್ಲೂರ, ಸಂಜು ಪಂಚನ್ನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next