Advertisement

ABVP Meeting: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಿ ಹಾನಿಗೆ ಷಡ್ಯಂತ್ರ

02:16 AM Sep 22, 2024 | Team Udayavani |

ಮಂಗಳೂರು: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ಕೌಟುಂಬಿಕ ವ್ಯವಸ್ಥೆ ಹಾಗೂ ಭಾರತೀಯ ಸಂಸ್ಕೃತಿಯನ್ನು ಹಾಳುಗೆಡಹುವ ಷಡ್ಯಂತ್ರ ನಡೆಯುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ರಾಷ್ಟ್ರೀಯ ಸಹ ಸಂಘಟನ ಕಾರ್ಯದರ್ಶಿ ಎಸ್‌. ಬಾಲಕೃಷ್ಣ ಹೇಳಿದ್ದಾರೆ.

Advertisement

ಅಳಕೆ ಉಮಾಧಾಮ್‌ ಸಭಾಂಗಣದಲ್ಲಿ ಶನಿವಾರ ಎಬಿವಿಪಿ ಕರ್ನಾಟಕ ದಕ್ಷಿಣಪ್ರಾಂತ ಕಾರ್ಯಕಾರಿಣಿಯ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಅವರು, ಕಮ್ಯೂನಿಸ್ಟ್‌ ಸಿದ್ಧಾಂತ ಪ್ರೇರಿತವಾದ ಈ ಅಂತಾರಾಷ್ಟ್ರೀಯ ಷಡ್ಯಂತ್ರದ ಬಗ್ಗೆ ವಿದ್ಯಾ ರ್ಥಿಗಳು ಜಾಗ್ರತೆಯಿಂದ ಇರಬೇಕು ಎಂದರು. ಮಹಿಳೆಯರ ಬಗೆಗಿನ ನಿರೂಪಣೆ ಯನ್ನು ಬದಲಿಸುವ, ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರಕ್ಕೆ ಆದ್ಯತೆ ನೀಡುವ, ದಲಿತ, ಬುಡಕಟ್ಟು ಜನಾಂಗದ ವಿದ್ಯಾರ್ಥಿ ಗಳನ್ನು ಇತರ ವಿದ್ಯಾರ್ಥಿಗಳ ವಿರುದ್ಧ ಎತ್ತಿ ಕಟ್ಟುವುದೂ ಸೇರಿದಂತೆ ವಿವಿಧ ಷಡ್ಯಂತ್ರ, ಪಿತೂರಿಯ ಒಳಮರ್ಮವನ್ನು ಅರಿತು ವಿದ್ಯಾರ್ಥಿ ಸಮುದಾಯ ಜಾಗೃತ ಗೊಳ್ಳಬೇಕು ಎಂದು ಅವರು ಹೇಳಿದರು.

ಮೊಘಲರು ಭಾರತಕ್ಕೆ ಖಡ್ಗ ಹಿಡಿದು ಬಂದರೆ, ಬ್ರಿಟಿಷರು ಬಂದೂಕು ಹಿಡಿದು ಆಡಳಿತ ನಡೆಸಿದರು. ಈಗ ಕಮ್ಯೂ ನಿಸ್ಟರು, ಕೆಲ ಇಸ್ಲಾಮಿಕ್‌ ಮೂಲಭೂತ ವಾದಿಗಳಿಂದ ಯುವಜನಾಂಗದ ಮನಸ್ಸಿನ ದಿಕ್ಕು ಬದಲಿಸುವ ಬೆಳವಣಿಗೆಗಳು ನಡೆಯುತ್ತಿವೆ. ಈ ಬಗ್ಗೆ ಯುವ ಸಮೂಹ ಎಚ್ಚರದಿಂದಿರಬೇಕು ಎಂದರು.

ಯುವ ಸಂಪತ್ತಿನ ದೇಶ
ದೇಶದ ಶೇ.65ರಷ್ಟು ಜನರ ಸರಾಸರಿ ವಯಸ್ಸು 28 ವರ್ಷ ಆಗಿದೆ. ಭಾರತ ಈಗ ಯುವ ಸಮೂಹವಿರುವ ಮಾನವ ಸಂಪನ್ಮೂಲ ಒಳಗೊಂಡ ದೇಶ. ದೇಶದ ಅಮೃತ ಕಾಲದಲ್ಲಿ ಭಾರತ ಪ್ರಪಂಚದ ಮೂರನೇ ಆರ್ಥಿಕ ಶಕ್ತಿಯಾಗುವತ್ತ ಮುನ್ನುಗ್ಗುತ್ತಿದೆ ಎಂದು ಹೇಳಿದರು. ಎಬಿವಿಪಿ ಬಹು ಆಯಾ ಮದ ಚಟುವಟಿಕೆಗಳಿಗೆ ಒತ್ತು ನೀಡಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದೆ ಎಂದ ಅವರು, ಸಮಾಜ ಪರಿವರ್ತನೆ ಮೂಲಕ ದೇಶವನ್ನು ವಿಶ್ವ ಗುರುವನ್ನಾಗಿಸುವುದು ಇದರ ಗುರಿ ಎಂದರು.

ಎಬಿವಿಪಿ ರಾಜ್ಯ ಉಪಾಧ್ಯಕ್ಷ ಅಜಯ ಕುಮಾರ್‌, ರಾಜ್ಯ ಕಾರ್ಯದರ್ಶಿ ಪ್ರವೀಣ್‌ಕುಮಾರ್‌, ಪ್ರಾಂತ ಸಂಘಟನ ಕಾರ್ಯದರ್ಶಿ ಬಸವೇಶ್‌ ಕೋರಿ ಉಪಸ್ಥಿತ ರಿದ್ದರು. ವಿವಿಧ ವಿಷಯಗಳ ಬಗ್ಗೆ ಚರ್ಚೆ, ಉಪನ್ಯಾಸ ನಡೆಯಿತು. ಸೆ.22ರಂದು ಕಾರ್ಯಕಾರಿಣಿ ಸಮಾರೋಪಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next