ನೋಯ್ಡಾ: ನೋಯ್ಡಾ ಸೆಕ್ಟರ್ 93ರ ಗ್ರ್ಯಾಂಡ್ ಒಮಾಕ್ಸ್ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ್ದ ಸ್ವಯಂಘೋಷಿತ ಬಿಜೆಪಿ ಮುಖಂಡ ಶ್ರೀಕಾಂತ್ ತ್ಯಾಗಿಯನ್ನು ಮಂಗಳವಾರ (ಆಗಸ್ಟ್ 09) ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ದ್ವೇಷ ಭಕ್ತರಿಗೆ ದೇಶದಲ್ಲಿ ಜಾಗವಿಲ್ಲ: ಬಿಜೆಪಿ ವಿರುದ್ಧ ಬಿ.ಕೆ ಹರಿಪ್ರಸಾದ್ ವಾಗ್ದಾಳಿ
ಎಎನ್ ಐ ವರದಿ ಪ್ರಕಾರ, ತ್ಯಾಗಿಯನ್ನು ಉತ್ತರಪ್ರದೇಶದ ನೋಯ್ಡಾದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದೆ. ನೋಯ್ಡಾದ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ ಆರೋಪಕ್ಕೆ ಗುರಿಯಾಗಿರುವ ತ್ಯಾಗಿ ಮನೆಯನ್ನು ಬುಲ್ಡೋಜರ್ ನಿಂದ ಧ್ವಂಸಗೊಳಿಸಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ತ್ಯಾಗಿ ವಿರುದ್ಧ ಎಫ್ ಐಆರ್ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ. ಏತನ್ಮಧ್ಯೆ ತ್ಯಾಗಿ ಅಕ್ರಮವಾಗಿ ನಿರ್ಮಿಸಿದ್ದ ನಿವಾಸದ ಭಾಗವನ್ನು ನೋಯ್ಡಾ ಅಧಿಕಾರಿಗಳು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿದ್ದರು.
ಆರೋಪಿ ಶ್ರೀಕಾಂತ್ ಉತ್ತರಾಖಂಡ್ ಗೆ ಪರಾರಿಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದ್ದವು. ಆದರೆ ತ್ಯಾಗಿ ಮೊಬೈಲ್ ನೆಟ್ ವರ್ಕ್ ಟ್ರೇಸ್ ಮಾಡಿದಾಗ ಆತ ಹರಿದ್ವಾರ ಮತ್ತು ಋಷಿಕೇಶದ ಸ್ಥಳದಲ್ಲಿರುವುದಾಗಿ ಪತ್ತೆಯಾಗಿತ್ತು.
ಸ್ವಯಂಘೋಷಿತ ರಾಜಕೀಯ ಮುಖಂಡನ ಬಗ್ಗೆ ಮಾಹಿತಿ ನೀಡಿದವರಿಗೆ 25 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ನೋಯ್ಡಾ ಪೊಲೀಸರು ಸೋಮವಾರ (ಆಗಸ್ಟ್ 09) ಘೋಷಿಸಿದ್ದರು.