Advertisement

UV Fusion: ಎಲ್ಲಕ್ಕಿಂತ ಅಂತರಂಗದ ಶ್ರೀಮಂತಿಕೆ ಅಗತ್ಯ

12:36 PM Sep 11, 2023 | Team Udayavani |

ಹೆತ್ತವರಿಗೆ ತಮ್ಮ ಕಂದಮ್ಮಗಳಿಗಿಂತ ದೊಡ್ಡ ಆಸ್ತಿ ಇನೊಂದಿಲ್ಲ. ಯಾವ ತಂದೆ, ತಾಯಿಯಾದರು ಅವರ ಮಕ್ಕಳ ಭವಿಷ್ಯ ತಮಗಿಂತ ಉತ್ತಮವಾಗಿರಲಿ ಎಂದೇ ಬಯಸುತ್ತಾರೆ. ತಾವು ಕಂಡ ಕಷ್ಟ, ನೋವು, ಏರಿಳಿತಗಳನ್ನು ಮಕ್ಕಳು ಅನುಭವಿಸಬಾರದೆಂದು ದೇವರಲ್ಲಿ ಸದಾ ಪ್ರಾರ್ಥಿಸುತ್ತಾರೆ. ಅವರ ಉತ್ತಮ ಭವಿಷ್ಯಕ್ಕಾಗಿ ತಮ್ಮ ಕೈಲಾದಷ್ಟು ಶ್ರಮ ಪಡುತ್ತಾರೆ. ಆದರೆ ಇವೆಲ್ಲದರಿಂದ ಕೇವಲ ಮನುಷ್ಯನ ಬಾಹ್ಯ ಜೀವನವನ್ನು ರೂಪಿಸಬಹುದೇ ವಿನಃ ಒಬ್ಬ ವ್ಯಕ್ತಿಯನ್ನು ಅಂತರಂಗದಿಂದ ಶ್ರೀಮಂತನನ್ನಾಗಿ ಮಾಡಲು ಸಾಧ್ಯವಿಲ್ಲ.

Advertisement

ಆಂತರಿಕವಾಗಿ ಬೆಳೆಯಲು, ಉತ್ತಮ ವ್ಯಕ್ತಿತ್ವ ಹೊಂದಲು ಸನ್ಮಾರ್ಗದ ಶಿಕ್ಷಣ ಅತ್ಯಗತ್ಯ. ಇದನ್ನು ಯಾವ ಶಾಲೆ ಕಾಲೇಜುಗಳೂ ಕಲಿಸುವುದಿಲ್ಲ. ಅದಕ್ಕಾಗಿ ಮನೆಯೆ ಮೊದಲ ಪಾಠ ಶಾಲೆ ತಾಯಿಯೆ ಮೊದಲ ಗುರು ಎಂದು ಹೇಳುವುದು. ತಂದೆ, ತಾಯಿ ಮಗುವಿಗೆ ಲೋಕದ ಅರಿವು ಆರಂಭವಾದಾಗಲೇ ನೈತಿಕ ಶಿಕ್ಷಣವನ್ನು, ಮನುಷ್ಯತ್ವದ ಮೌಲ್ಯಗಳನ್ನು, ಆದರ್ಶ ವ್ಯಕ್ತಿಗಳ ಚರಿತ್ರೆಯನ್ನು ಬೋಧಿಸಬೇಕು. ಮಕ್ಕಳು ಬೆಳೆದು ದೊಡ್ಡವರಾಗುವ ಮುನ್ನವೇ ಅವರಲ್ಲಿ ಉತ್ತಮ ಆಲೋಚನೆಗಳನ್ನು ಮೂಡಿಸುವುದು ಅಗತ್ಯ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ಎಂಬ ಗಾದೆಯಂತೆ ಸಣ್ಣ ವಯಸ್ಸಿನಲ್ಲಿ ನಿಡುವ ಶಿಕ್ಷಣವನ್ನು ಆಗಲೆ ಕೊಡದಿದ್ದರೆ ಮುಂದೆ ಅದು ಅದನ್ನು ಕಲಿಸಲು ಸಾಧ್ಯವಿಲ್ಲ. ತಂದೆ, ತಾಯಿಗಳು ಕೇವಲ ಮಕ್ಕಳ ಬಾಹ್ಯ ಜೀವನವನ್ನು ಶ್ರೀಮಂತವಾಗಿ ನಿರ್ಮಿಸುವಲ್ಲಿ ಚಿಂತಿಸದೆ ಅವರು ಸಮಾಜಕ್ಕೆ ಆಗುವಂತೆ ಬೆಳೆಸಬೇಕು.

ಈ ಕಾರ್ಯ ಮಾಡಬೇಕೆಂದರೆ ಮೊದಲನೆಯದಾಗಿ ತಾವು ಒಳ್ಳೆಯ ಚಿಂತನೆ, ಕಾಯಕ, ಸಜ್ಜನರ ಸಹವಾಸವನ್ನು ರೂಡಿಸಿಕೊಳ್ಳುವುದು ಅಗತ್ಯ. ನಮ್ಮಲ್ಲಿ ದೋಷವನ್ನು ಇಟ್ಟುಕೊಂಡು ಇನ್ನೊಬ್ಬರಿಗೆ ಬೋಧಿಸವುದು, ಸರಿದಾರಿಗೆ ತರುವುದು ಅಸಾಧ್ಯ. ನಾವು ಉತ್ತಮರಾದಲ್ಲಿ ಮಾತ್ರ ಅವರನ್ನು ಅತ್ಯುತ್ತಮರನ್ನಾಗಿಸಲು ಸಾಧ್ಯ. ಹೀಗಾಗಿ ನಮ್ಮ ಮಕ್ಕಳ ಕುರಿತು ಹಗಲಿರುಳು ಚಿಂತಿಸುವ ನಾವು ಪ್ರಥಮವಾಗಿ ಆದರ್ಶ ತತ್ವಗಳನ್ನು ಪಾಲಿಸಿ ಅನಂತರ ಅವರನ್ನು ಸಮಾಜಕ್ಕೆ ಆಸ್ತಿಯನ್ನಾಗಿ ಮಾಡೋಣ.

-ಪೂಜಾ ಹಂದ್ರಾಳ

ಎಸ್‌ಡಿಎಂ, ಕಾಲೇಜು ಉಜಿರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next