Advertisement

45 ವರ್ಷ ಮೇಲ್ಪಟ್ಟವರು ತಪ್ಪದೇ ಲಸಿಕೆ ಪಡೆಯಿರಿ : ಯತ್ನಾಳ್

08:31 PM Apr 06, 2021 | Girisha |

ವಿಜಯಪುರ: ಕೋವಿಡ್‌-19 ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಆಗುವುದಿಲ್ಲ. 45 ವರ್ಷ ಮೇಲ್ಪಟ್ಟವರು 60 ವರ್ಷ ಒಳಗಿನವರು ತಪ್ಪದೇ ಕೋವಿಡ್‌-19 ಲಸಿಕೆ ಪಡೆಯುವಂತೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕರೆ ನೀಡಿದರು.

Advertisement

ಸೋಮವಾರ ನಗರದ ವಜ್ರಹನುಮಾನ ಗುಡಿ ಆವರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಯದಂತೆ ಮನೆ-ಮನೆಗೆ ಕೋವಿಡ್‌ ವ್ಯಾಕ್ಸಿನ್‌ ಲಸಿಕೆ ಹಂಚಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಾರತ ಸೇರಿದಂತೆ ವಿಶ್ವದಲ್ಲಿ ಕೋವಿಡ್‌ ಎರಡನೇ ಅಲೆ ಆರಂಭವಾಗಿದೆ. ಈ ಹಂತದಲ್ಲಿ ದೇಶದಲ್ಲಿ ಸಂಶೋಧಿತ ಕೋವ್ಯಾಕ್ಸಿನ್‌ ಪಡೆಯುವುದು ಸೂಕ್ತವಾಗಿದ್ದು ವ್ಯಾಕ್ಸಿನ್‌ ಪಡೆದವರಿಗೆ ಯಾವುದೇ ರೀತಿಯಲ್ಲಿ ಅಡ್ಡಪರಿಣಾಮ ಆಗುವುದಿಲ್ಲ ಎಂದರು.

ಕೋವಿಡ್‌ ವಿಷಯದಲ್ಲಿ ಜನರು ಜಾಗೃತರಾಗಿದ್ದು ತಪ್ಪದೇ ಸರಕಾರದ ಮಾರ್ಗಸೂಚಿ ಪಾಲಿಸಬೇಕು. ನಿಯಮಗಳ ನಿರ್ಲಕ್ಷéದಿಂದ ಮಾರಕ ರೋಗಕ್ಕೆ ತುತ್ತಾಗುವ ಅಪಾಯವಿದೆ. ಹೀಗಾಗಿ ಜನರಲ್ಲಿ ಜಾಗೃತಿ ಅಗತ್ಯವಾಗಿದ್ದು ತಕ್ಷಣ ಎಲ್ಲರೂ ಕೋವ್ಯಾಕ್ಸಿನ್‌ ಪಡೆಯಬೇಕು ಎಂದು ಸಲಹೆ ನೀಡಿದರು.

ಲಸಿಕೆ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ಸರಿಯಲ್ಲ. ಪ್ರಧಾನ ಮಂತ್ರಿ ಮೋದಿ ಅವರ ಮುತುವರ್ಜಿಯಿಂದ ವಿಶ್ವದಲ್ಲೇ ಪ್ರಥಮವಾಗಿ ಲಸಿಕೆ ಸಂಶೋಧಿ ಸುವ ಜೊತೆಗೆ ದೇಶ-ವಿದೇಶಗಳಿಗೆ ರಫ್ತು ಮಾಡಲ್ಪಟ್ಟಿದೆ. ಇದು ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿ. ಕೋವಿಡ್‌ ಎರಡನೇ ಅಲೆ ನಿಗ್ರಹದಲ್ಲಿ ಈ ವ್ಯಾಕ್ಸಿನ್‌ ಸಹಕಾರಿ ಅಗಲಿದೆ ಎಂದರು. ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮಾತನಾಡಿ, ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 3.40 ಲಕ್ಷ ಜನರಿದ್ದು, 60 ವರ್ಷ ಮೇಲ್ಪಟ್ಟ 2.40 ಲಕ್ಷ ಜನರಿದ್ದಾರೆ. ಒಟ್ಟು, 5.80 ಲಕ್ಷ ಜನರಲ್ಲಿ ಈವರೆಗೆ 1.40 ಲಕ್ಷ ಜನ ಲಸಿಕೆ ಪಡೆದಿದ್ದಾರೆ. ನಗರ ಪ್ರದೇಶದಲ್ಲಿ ಶೇ. 100 ಲಸಿಕೆಯಲ್ಲಿ ಪ್ರಗತಿ ಸಾಧಿಸಲು ಜಿಲ್ಲಾಡಳಿತಕ್ಕೆ ಶಾಸಕರು ವಾಹನ ಒದಗಿಸಿದ್ದು ಹೆಚ್ಚು ಸಹಕಾರಿ ಆಗಿದೆ. ಗ್ರಾಮೀಣ ಪ್ರದೇಶದಲ್ಲಿ ಲಸಿಕಾ ಅಭಿಯಾನ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ 45 ವರ್ಷ ಮೇಲ್ಪಟ್ಟ ಎಲ್ಲರೂ ತಪ್ಪದೇ ಕೋವ್ಯಾಕ್ಸಿನ್‌ ಪಡೆಯುವಂತೆ ಮನವಿ ಮಾಡಿದರು.

ಇದೇ ವೇಳೆ ಹಸಿರು ಕ್ರಾಂತಿ ಹರಿಕಾರ ಡಾ| ಬಾಬು ಜಗಜೀವನರಾಂ ಜಯಂತಿ ಅಂಗವಾಗಿ ಡಾ| ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಿದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅ ಧಿಕಾರಿ ಡಾ| ರಾಜಕುಮಾರ ಯರಗಲ್‌ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಿಇಒ ಗೋವಿಂದರೆಡ್ಡಿ, ವೂಡಾ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾ ಆಸ್ಪತ್ರೆ ಸರ್ಜನ್‌ ಡಾ| ಶರಣಪ್ಪ ಕಟ್ಟಿ, ಡಾ| ಎಸ್‌.ಎಲ್‌. ಲಕ್ಕಣ್ಣವರ್‌, ಆರ್‌ ಸಿಎಚ್‌ ಅ ಧಿಕಾರಿ ಡಾ| ಮಹೇಶ ನಾಗರಬೆಟ್ಟ, ಪಾಲಿಕೆ ಮಾಜಿ ಸದಸ್ಯ ಪ್ರೇಮಾನಂದ ಬಿರಾದಾರ, ಪಾಂಡು ಸಾಹುಕಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next