Advertisement
ಹೀಗೆಂದು ನಾವು ಹೇಳುತ್ತಿಲ್ಲ, ಅಥವಾ ಯಾವುದೇ ರಾಜಕೀಯ ಪಕ್ಷ ಅಥವಾ ಸಾಮಾಜಿಕ ಸಂಘಟನೆ ಮಾಡುತ್ತಿರುವ ಆರೋಪವೂ ಅಲ್ಲ. ಸ್ವತಃ ಚುನಾವಣಾ ಆಯೋಗ ನಡೆಸಿದ ಸಮೀಕ್ಷೆಯಲ್ಲೇ ಈ ಸತ್ಯಾಂಶ ಬೆಳಕಿಗೆ ಬಂದಿದೆ.
Related Articles
Advertisement
ಹೇಗೆ ನಡೆದಿದೆ ಈ ಸಮೀಕ್ಷೆ?ಮತದಾರರ ನೋಂದಣಿ, ಮತದಾನ ಸೇರಿ ಒಟ್ಟಾರೆ ಚುನಾವಣಾ ಪ್ರಕ್ರಿಯೆ ಬಗ್ಗೆ ಮತದಾರರ ಅಥವಾ ಸಾರ್ವಜನಿಕರ ತಿಳುವಳಿಕೆ, ಕುತೂಹಲ, ಅನುಮಾನಗಳು, ಸಕ್ರೀಯ ಪಾಲ್ಗೊಳ್ಳುವಿಕೆ ಮತ್ತಿತರರ ವಿಷಯಗಳ ಬಗ್ಗೆ ತಿಳಿದುಕೊಂಡು ಕೊರತೆ ಅಥವಾ ಅವಶ್ಯಕತೆ ಕಂಡು ಬರುವ ವಿಷಯಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ 2018ರ ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ಚುನಾವಣಾ ಆಯೋಗ ಕೆ.ಎ.ಪಿ (ನಾಲೇಜ್, ಆಟಿಟ್ಯೂಡ್ ಆ್ಯಂಡ್ ಪ್ರಾಕ್ಟಿಸ್) ಹೆಸರಿನಲ್ಲಿ ಸರ್ವೆ ನಡೆಸಿದೆ. ನಾಲ್ಕು ಕಂದಾಯ ವಿಭಾಗಗಳ 40 ವಿಧಾನಸಭಾ ಕ್ಷೇತ್ರಗಳಲ್ಲಿ ವಯಸ್ಸು, ಭೌಗೋಳಿಕವಾರು, ಶೈಕ್ಷಣಿಕ ಅರ್ಹತೆ, ಲಿಂಗ, ಉದ್ಯೋಗ, ಶೈಕ್ಷಣಿಕ ಅರ್ಹತೆ, ಎಸ್ಸಿ, ಎಸ್ಟಿ ಹಾಗೂ ಇತರೆ ವರ್ಗಗಳಿಂದ ವಿವಿಧ 129 ಅಂಶಗಳ ಬಗ್ಗೆ ರಾಜ್ಯದ ಏಳು ಸಾವಿರ ಕುಟುಂಬಗಳಿಂದ ಮಾಹಿತಿ ಕಲೆ ಹಾಕಲಾಗಿದೆ. “ನೋಟಾ’ ಡೋಂಟ್ ನೋ
ಅಭ್ಯರ್ಥಿಗಳ ಬಗ್ಗೆ ಅಸಮ್ಮತಿ, ಅಸಮಧಾನವಿದ್ದರೆ ಯಾರಿಗೂ ಮತಹಾಕದಿರುವಂತೆ 2013ರಲ್ಲಿ “ನೋಟಾ’ (ನನ್ ಆಫ್ ದಿ ಅಬೌ) ಜಾರಿಗೆ ತರಲಾಗಿದೆ. ಚುನಾವಣಾ ಆಯೋಗ ಈಗ ನಡೆಸಿರುವ ಸಮೀಕ್ಷೆಯಲ್ಲಿ ಶೇ. 55ರಷ್ಟು ಮಂದಿಗೆ ಇವಿಎಂಗಳಲ್ಲಿ ನೋಟಾಗೆ ಅವಕಾಶವಿರುವ ಬಗ್ಗೆ ಗೊತ್ತಿಲ್ಲ. ಬೆಳಗಾವಿ ವಿಭಾಗದಲ್ಲಿ ಶೇ. 68, ಕಲಬುರಗಿ ವಿಭಾಗದಲ್ಲಿ ಶೇ. 66, ಮೈಸೂರು ವಿಭಾಗದಲ್ಲಿ ಶೇ. 63 ಹಾಗೂ ಬೆಂಗಳೂರು ವಿಭಾಗದಲ್ಲಿ ಶೇ. 32ರಷ್ಟು ಮಂದಿಗೆ ನೋಟಾ ಬಗ್ಗೆ ಗೊತ್ತಿಲ್ಲ. ಪುರುಷರಲ್ಲಿ ಶೇ. 52, ಮಹಿಳೆಯರಲ್ಲಿ ಶೇ. 58, ತೃತೀಯ ಲಿಂಗಿಗಳಲ್ಲಿ ಶೇ. 22, ಗ್ರಾಮೀಣ ಭಾಗದಲ್ಲಿ ಶೇ. 55, ನಗರ ಭಾಗದಲ್ಲಿ ಶೇ. 54, ಎಸ್ಟಿಗಳಲ್ಲಿ ಶೇ. 61, ಎಸ್ಟಿಗಳಲ್ಲಿ ಶೇ. 57, ಓಬಿಸಿಗಳಲ್ಲಿ ಶೇ. 54 ಮತ್ತು ಇತರ ವರ್ಗಗಳಲ್ಲಿ ಶೇ. 50. 18ರಿಂದ 25 ವರ್ಷದ ಶೇ. 63, 26ರಿಂದ 35 ಶೇ. 57, 36ರಿಂದ 45 ವರ್ಷದ ಶೆ. 55, 46ರಿಂದ 60 ವರ್ಷದ ಶೇ. 53, 60 ವರ್ಷ ಮೇಲ್ಪಟ್ಟ ಶೇ. 50ರಷ್ಟು ಮಂದಿಗೆ ನೋಟಾ ಆಯ್ಕೆಯ ಬಗ್ಗೆ ಮಾಹಿತಿ ಇಲ್ಲ. ಶೇ. 20ರಷ್ಟು ಮಂದಿಗೆ ಮುಂಬರುವ ಚುನಾವಣೆಯಲ್ಲಿ ಮತ ಹಾಕುವ ಉದ್ದೇಶ ತಮಗಿಲ್ಲ ಎಂದು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ. “ಕೆಎಪಿ ಸರ್ವೆ ಎರಡು ತಿಂಗಳ ಹಿಂದೆ ನಡೆಸಿದ್ದು, ಹಾಗಾಗಿ, ವಿವಿಪ್ಯಾಟ್ ಬಗ್ಗೆ ಮಾಹಿತಿ ಇಲ್ಲದಿರುವ ಪ್ರಮಾಣ ಹೆಚ್ಚಾಗಿ ಕಾಣುತ್ತಿದೆ. ಆದರೆ, ಈ ಹಂತದಲ್ಲಿ ಸರ್ವೆ ನಡೆಸಿದರೆ ವಿವಿಪ್ಯಾಟ್ ಬಗ್ಗೆ ಹೆಚ್ಚಿನ ಜನರಲ್ಲಿ ತಿಳುವಳಿಕೆ ಇರುವುದು ಗೊತ್ತಾಗುತ್ತದೆ. ಈಗ ಜನರಿಗೆ ವಿವಿಪ್ಯಾಟ್ ಕುರಿತು ಮಾಹಿತಿ ಅಥವಾ ತಿಳುವಳಿಕೆಯ ಕೊರತೆ ಇಲ್ಲ’.
– ರಾಘವೇಂದ್ರ, ರಾಜ್ಯ ಉಪ ಮುಖ್ಯ ಚುನಾವಣಾಧಿಕಾರಿ. – ರಫೀಕ್ ಅಹ್ಮದ್