ಬೀದರ್: ಅಲ್ಪಸಂಖ್ಯಾತರರಿಗೆ ಮೀಸಲಾತಿ ಕಲ್ಪಿಸಿ ಕಾಂಗ್ರೆಸ್ ತುಷ್ಠೀಕರಣ ರಾಜಕಾರಣ ಮಾಡುತ್ತ ಬಂದಿತ್ತು. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಮೀಸಲಾತಿ ಕೋಟಾ ರದ್ದುಗೊಳಿಸಿ ಒಳ್ಳೆಯ ಕೆಲಸ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಜಿಲ್ಲೆಯ ಗೋರ್ಟಾ(ಬಿ) ಗ್ರಾಮದಲ್ಲಿ ಕೇಶವ ಕಾರ್ಯ ಸಂವರ್ಧನ ಸಮಿತಿ ಹಮ್ಮಿಕೊಂಡಿದ್ದ ಹುತಾತ್ಮ ಸ್ಮಾರಕ ಹಾಗೂ ಸರ್ದಾರ್ ಪಟೇಲ್ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶ ಇರಲಿಲ್ಲ. ಆದರೂ ಓಟ್ ಬ್ಯಾಂಕ್ ಆಸೆಗಾಗಿ ಅಲ್ಪಸಂಖ್ಯಾತರರಿಗೆ ಶೇ.4ರಷ್ಟು ಮೀಸಲಾತಿ ನೀಡಿತ್ತು. ಬೊಮ್ಮಾಯಿ ಸರ್ಕಾರ ಅದನ್ನು ತೆಗೆದು ಹಾಕಿ ಒಕ್ಕಲಿಗರು ಮತ್ತು ಲಿಂಗಾಯತರ ಮೀಸಲು ಪ್ರಮಾಣವನ್ನು ತಲಾ ಶೇ. 2ರಷ್ಟು ಹೆಚ್ಚಿಸುವ ನಿರ್ಧಾರ ಕೈಗೊಂಡಿರುವುದು ಸರಿಯಾದ ಕ್ರಮವಾಗಿದೆ ಎಂದರು.
ಅಷ್ಟೇ ಅಲ್ಲ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಒಳ ಮೀಸಲಾತಿ ಸಹ ಒದಗಿಸಲಾಗಿದೆ. ದಲಿತ ಎಡ ಸಮುದಾಯಕ್ಕೆ ಶೇ. 6, ಬಲ ಶೇ. 5.5 ಸ್ಪೃಶ್ಯ (ಲಂಬಾಣಿ, ಇತರ) ಶೇ. 4.5 ಹಾಗೂ ಇತರ ದಲಿತರು ಶೇ. 1ರಷ್ಟು ಒಳ ಮೀಸಲಾತಿ ನೀಡುವ ಮೂಲಕ ಎಲ್ಲ ವರ್ಗಗಳಿಗೂ ಸಮಾನವಾಗಿ ಮಿಸಲಾತಿ ಹಂಚಿಕೆ ಮಾಡಿ ನ್ಯಾಯ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ಅಮೃತಪಾಲ್ ಸಿಂಗ್ ಜನಪ್ರಿಯತೆಗಾಗಿ ಮಂದೀಪ್ ಸಂಘಟನೆ ಪಿಗ್ಗಿಬ್ಯಾಕ್ ಮಾಡಿದನೇ?
ಓಟ್ ಬ್ಯಾಂಕ್ ಗಾಗಿ ಕಾಶ್ಮೀರದಲ್ಲಿ ಕಲಂ 370 ವಿಧಿ ತೆಗೆಯುವ ಕೆಲಸ ಮಾಡಿರಲಿಲ್ಲ. ಆದರೆ, ಪ್ರಧಾನಿ ಮೋದಿ ಸರ್ಕಾರ ವಿಶೇಷ ಕಾನೂನು ತೆರವುಗೊಳಿಸಿ ಕಾಶ್ಮೀರವನ್ನು ಶಾಶ್ವತವಾಗಿ ಭಾರತದ ಅವಿಭಾಜ್ಯ ಅಂಗವನ್ನಾಗಿಸಲಾಯಿತು. ಇಂದು ಕಾಶ್ಮೀರದಲ್ಲಿ ಸು:ಖ- ಶಾಂತಿ ನೆಲೆಸಿದ್ದು, ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಇನ್ನೊಂದೆಡೆ ಸುಪ್ರೀಂ ಕೋರ್ಟ್ ಪ್ರಕಟವಾಗುತ್ತಿದ್ದಂತೆ ಪ್ರಧಾನಿ ಮೋದಿ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ದಿಟ್ಟ ಕ್ರಮ ಕೈಗೊಂಡಿದ್ದರು ಎಂದು ಹೇಳಿದರು.