Advertisement

H1-B ವೀಸಾ ವ್ಯವಸ್ಥೆ ರದ್ದು: ವಿವೇಕ್‌ ರಾಮಸ್ವಾಮಿ

09:37 PM Sep 17, 2023 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಎಚ್‌1-ಬಿ ವೀಸಾ ವ್ಯವಸ್ಥೆ ರದ್ದುಪಡಿಸಲಾಗುವುದು ಎಂದು ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್‌ ರಾಮಸ್ವಾಮಿ ಘೋಷಿಸಿದ್ದಾರೆ. “ಎಚ್‌-1ಬಿ ವೀಸಾ ಲಾಟರಿ ಆಧಾರಿತ ವ್ಯವಸ್ಥೆ ಆಗಿದ್ದು, ಇದನ್ನು ಕೌಶಲ್ಯಾಧರಿತ ವ್ಯವಸ್ಥೆಯಾಗಿ ಬದಲಾಯಿಸಬೇಕಿದೆ. ಇದರಿಂದ ಕಂಪನಿಗಳು ಮಾತ್ರ ಲಾಭ ಪಡೆದುಕೊಳ್ಳುತ್ತಿವೆ. ಇದು ಒಪ್ಪಂದದ ಜೀತ ಪದ್ಧತಿ. ಅಮೆರಿಕ ಅಧ್ಯಕ್ಷನಾದರೆ ಈ ವ್ಯವಸ್ಥೆಗೆ ಅಂತ್ಯ ಹಾಡಲಿದ್ದೇನೆ’ ಎಂದು ಹೇಳಿದ್ದಾರೆ. ವಿಶೇಷವೆಂದರೆ, ಸ್ವತಃ ವಿವೇಕ್‌ ಅವರೇ ಎಚ್‌-1ಬಿ ವೀಸಾದ ಪ್ರಯೋಜನವನ್ನು 29 ಬಾರಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Advertisement

ಎಚ್‌-1ಬಿ ವಲಸಿಗರಲ್ಲದವರಿಗೆ ನೀಡುವ ವೀಸಾ ಆಗಿದೆ. ವಿಶೇಷ ತಾಂತ್ರಿಕ ಪರಿಣತಿಯ ವಿದೇಶಿಯರನ್ನು ಅಮೆರಿಕದ ಕಂಪನಿಗಳು ನೇಮಕ ಮಾಡಿಕೊಳ್ಳುತ್ತವೆ. ಅಮೆರಿದಲ್ಲಿ ಕೆಲಸ ಮಾಡಲು ಎಚ್‌-1ಬಿ ವೀಸಾ ಹೊಂದಿರುವುದು ಕಡ್ಡಾಯ. ಅಮೆರಿಕ ಸರ್ಕಾರವು ವಾರ್ಷಿಕವಾಗಿ 65,000 ಎಚ್‌1-ಬಿ ವೀಸಾ ವಿತರಿಸುವ ಗುರಿ ನಿಗದಿಪಡಿಸಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಭಾರತೀಯರು ಮತ್ತು ಚೀನೀಯರು ಈ ವೀಸಾದ ಫ‌ಲಾನುಭವಿಗಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next