Advertisement

ಒಲಿಂಪಿಕ್ಸ್‌ ಟಾಸ್ಕ್ ಫೋರ್ಸ್‌ನಲ್ಲಿ ಬಿಂದ್ರಾ, ಗೋಪಿಚಂದ್‌

03:45 AM Jan 31, 2017 | Team Udayavani |

ಹೊಸದಿಲ್ಲಿ: ಮುಂದಿನ ಮೂರು ಒಲಿಂಪಿಕ್ಸ್‌ಗಳಿಗಾಗಿ ಕ್ರಿಯಾ ಯೋಜನೆ ರೂಪಿಸಲು ಕ್ರೀಡಾ ಸಚಿವಾಲಯ  ಸ್ಥಾಪಿಸಿದ ಎಂಟು ಸದಸ್ಯರ ಟಾಸ್ಕ್ ಫೋರ್ಸ್‌ನಲ್ಲಿ ಒಲಿಂಪಿಕ್ಸ್‌ ಚಿನ್ನ ವಿಜೇತ ಅಭಿನವ್‌ ಬಿಂದ್ರಾ ಮತ್ತು ರಾಷ್ಟ್ರೀಯ ಬ್ಯಾಡ್ಮಿಂಟನ್‌ ಕೋಚ್‌ ಪುಲ್ಲೇಲ ಗೋಪಿಚಂದ್‌ ಸ್ಥಾನ ಪಡೆದಿದ್ದಾರೆ.

Advertisement

ರಿಯೋ ಒಲಿಂಪಿಕ್ಸ್‌ ಮುಗಿದ ಕೆಲವು ದಿನಗಳ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂಬರುವ ಒಲಿಂಪಿಕ್ಸ್‌ನ ದೃಷ್ಟಿಯಲ್ಲಿಟ್ಟುಕೊಂಡು ಟಾಸ್ಕ್ ಫೋರ್ಸ್‌ ರಚಿಸುವುದಾಗಿ ಪ್ರಕಟಿಸಿದ್ದರು. 2020, 2024 ಮತ್ತು 2028ರ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಪರಿಣಾಮಕಾರಿಯಾಗಿ ಭಾಗವಹಿಸಲು ಕ್ರಿಯಾ ಯೋಜನೆ ರೂಪಿಸಲು ಈ ಟಾಸ್ಕ್ ಫೋರ್ಸ್‌ ಅನ್ನು ಸ್ಥಾಪಿಸಲಾಗಿದೆ.

ಬಿಂದ್ರಾ, ಗೋಪಿಚಂದ್‌ ಮತ್ತು ಭಾರತೀಯ ಹಾಕಿ ತಂಡದ ಮಾಜಿ ನಾಯಕ ವಿರೇನ್‌ ರಸ್ಕಿನ್ಹ ಟಾಸ್ಕ್ ಫೋರ್ಸ್‌ನಲ್ಲಿ ಕಾಣಿಸಿಕೊಂಡಿರುವ ಕೇವಲ ಮೂವರು ಕ್ರೀಡಾಪಟುಗಳಾಗಿದ್ದಾರೆ. ಸ್ಕೂಲ್‌ ನ್ಪೋರ್ಟ್ಸ್ ಪ್ರಮೋಶನ್‌ ಬೋರ್ಡ್‌ ಮುಖ್ಯಸ್ಥ ಓಂ ಪಾಠಕ್‌, ಹಾಕಿ ಕೋಚ್‌ ಎಸ್‌. ಬಲದೇವ್‌ ಸಿಂಗ್‌, ಪ್ರೊ| ಜಿಎಲ್‌ ಖನ್ನಾ, ಪತ್ರಕರ್ತ ರಾಜೇಶ್‌ ಕಲಾÅ ಮತ್ತು ಗುಜರಾತ್‌ ಕ್ರೀಡಾ ಪ್ರಾಧಿಕಾರದ ಪ್ರಧಾನ ನಿರ್ದೇಶಕ ಸಂದೀಪ್‌ ಪ್ರಧಾನ್‌ ಟಾಸ್ಕ್ ಫೋರ್ಸ್‌ನಲ್ಲಿರುವ ಇನ್ನುಳಿದ ಐವರು ಸದಸ್ಯರಾಗಿದ್ದಾರೆ.

ಸಮಿತಿಯ ಅವಧಿ ಮೂರು ತಿಂಗಳು ಅಥವಾ ಸಮಿತಿ ತನ್ನ ವರದಿ ಸಲ್ಲಿಸುವ ಸಮಯದವರೆಗೆ ಎಂದು ಟಾಸ್ಕ್ ಫೋರ್ಸ್‌ ಅನ್ನು ಪ್ರಕಟಿಸಿದ ಕ್ರೀಡಾ ಸಚಿವ ವಿಜಯ್‌ ಗೋಯೆಲ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next