Advertisement
ಪುತ್ತೂರು ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಗೌಡ ಬಜತ್ತೂರು ಆಮಂತ್ರಣ ಪತ್ರವನ್ನು ದೇಗುಲದ ಮೆನೇಜರ್ ವೆಂಕಟೇಶ್ ಅವರಿಗೆ ಹಸ್ತಾಂತರಿಸಿ, ಚಾಲನೆ ನೀಡಿದರು.
ಮುಂದಾಳು ಸಚಿನ್ ಸುಂದರ ಗೌಡ ಮಾತನಾಡಿ, ನಡೆದಾಡುವ ದೇಗುಲವೆಂದೇ ಖ್ಯಾತಿವೆತ್ತ ಭಾರತೀಯ ಗೋ
ತಳಿಗಳನ್ನು ರಕ್ಷಿಸುವುದರಿಂದ ಮನು ಕುಲಕುಲದ ರಕ್ಷಣೆಯನ್ನೂ ಮಾಡಿದಂತಾಗುತ್ತದೆ. ಭಾರತೀಯ ಗೋ ಪರಿವಾರದ ಈ ಶ್ರಮವನ್ನು ಸರಕಾರ ಮಾನ್ಯ ಮಾಡಿ ಭಾರತೀಯ ಗೋ ತಳಿಗಳ ಹತ್ಯೆಯನ್ನು ತಡೆಗಟ್ಟಬೇಕು ಎಂದರು. ಗೋ ಪರಿವಾರದ ಮುಂದಾಳುಗಳಾದ ರಾಮಚಂದ್ರ ಮಣಿಯಾಣಿ, ಹೇರಂಬ ಶಾಸ್ತ್ರೀ, ಯು.ಜಿ. ರಾಧ, ಸುರೇಶ್ ಅತ್ರಮಜಲು, ರಾಮಚಂದ್ರ ಮಣಿಯಾಣಿ, ಅನಿಲ್ ಕುಮಾರ್ ದಡ್ಡು, ದೇವಿಕಾ ಶಾಸ್ತ್ರೀ, ಹೊನ್ನಮ್ಮ ಭಟ್, ಜ್ಯೋತಿ ಹೇರಂಬ ಶಾಸ್ತ್ರೀ, ವಿಜಯಾ ಸತ್ಯನಾರಾಯಣ ಭಟ್, ಕೈಲಾರ್ ರಾಜ್‌ಗೋಪಾಲ ಭಟ್, ಜಯಂತಿ ಭಟ್, ಜಯಲಕ್ಷ್ಮೀ ಕಲಾಯಿ, ರಾಮ್ ಪ್ರಕಾಶ್, ಸರಳಿ ಶಿವಪ್ರಸಾದ್, ಗೋಪಾಲಕೃಷ್ಣ ನೈಮಿಷ ಉಪಸ್ಥಿತರಿದ್ದರು.