Advertisement

ಮಂಗಳೂರು:ಸಿಎಂ ಸಮ್ಮುಖದಲ್ಲೇ ಕೈ ಭಿನ್ನಮತ ಸ್ಫೋಟ

12:07 PM Oct 22, 2017 | Team Udayavani |

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಕಾಂಗ್ರೆಸ್‌ ಭಿನ್ನಮತ ಸ್ಫೋಟಗೊಂಡಿದೆ. ಮಾಜಿ ಸಚಿವ, ಶಾಸಕ ಅಭಯಚಂದ್ರ ಜೈನ್‌ ಮತ್ತು ಸರ್ಕಾರದ ಮುಖ್ಯಸಚೇತಕ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಅವರ ನಡುವಿನ ಭಿನ್ನಮತ ಬಯಲಾಗಿದೆ. 

Advertisement

ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಸ್ವಾಗತಿಸಲು ತೆರಳಿದ ಇಬ್ಬರು ನಾಯಕರ ಭಿನ್ನಮತ ಬಯಲಾಗಿದೆ. 

ಸಿಎಂ ಪಕ್ಕಕ್ಕೆ ಬರಲು ಯತ್ನಿಸಿದ ಡಿಸೋಜಾರನ್ನು ಜೈನ್‌ ತಳ್ಳಿದ್ದಾರೆ ಎಂದು ವರದಿಯಾಗಿದೆ. 

ಡಿಸೋಜಾ ಅವರು ಹಾಲಿ ಅಭಯಚಂದ್ರ ಜೈನ್‌ ಅವರು ಪ್ರತಿನಿಧಿಸುತ್ತಿರುವ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದು ಪರಸ್ಪರ ಭಿನ್ನಮತಕ್ಕೆ ಕಾರಣವಾಗಿದೆ ಎನ್ನಲಾಗಿದೆ. 

ವಿಮಾನ ನಿಲ್ದಾಣದಲ್ಲಿ ಸಿಎಂ ಸ್ವಾಗತಿಸಲು ಭಾರೀ ಸಂಖ್ಯೆಯ ಕಾಂಗ್ರೆಸ್‌ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಸಿಎಂ ಕಾರು ಹತ್ತಬೇಕಾದರೆ ಸುತ್ತಲೂ ಮುತ್ತಿದ್ದ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅಭಯಚಂದ್ರ ಜೈನ್‌ ಮತ್ತು ಐವನ್‌ ಡಿಸೋಜಾ ಅವರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ್ದರು. 

Advertisement

ಬಿ.ಸಿ.ರೋಡ್‌ ಲಘು ಲಾಠಿ ಪ್ರಹಾರ 


ಬಿ.ಸಿ.ರೋಡ್ ನಲ್ಲಿ ಸಿ.ಎಂ. ಭಾಗಿಯಾಗಿದ್ದ  ಕಾರ್ಯಕ್ರಮದಲ್ಲಿ ಕಾರ್ಯಕರ್ತರ ನೂಕುನುಗ್ಗಲು ಉಂಟಾಗಿ ಮಿನಿ ವಿಧಾನಸೌಧದ ಬಾಗಿಲು ಜಖಂಗೊಂಡಿದೆ . ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ  ಪ್ರಹಾರ ಮಾಡಿರುವ ಬಗ್ಗೆ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next