ಹವ್ಯಕ ಭವನದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ಡಿ.3ರಂದು ಕಲಬುರಗಿಯಲ್ಲಿ ಯಾತ್ರೆಗೆ ಚಾಲನೆ ನೀಡಲಾಗುವುದು. ಸುಮಾರು 45 ದಿನಗಳ ಕಾಲ ಯಾತ್ರೆ ನಡೆಯಲಿದ್ದು, ಪ್ರತಿ ಜಿಲ್ಲಾ ಕೇಂದ್ರಗಳಿಗೂ ಭೇಟಿ ನೀಡಲಿದೆ.
Advertisement
ಜನವರಿ 15ರಂದು ಬೆಂಗಳೂರಿನಲ್ಲಿ ಮುಕ್ತಾಯ ಗೊಳ್ಳಲಿದೆ ಎಂದರು. ಗೋವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈಗಾಗಲೇ ಗೋ ಅಭಯಾಕ್ಷರ ಆರಂಭವಾಗಿದೆ. ರಾಜ್ಯದಲ್ಲಿ ಸುಮಾರು 5 ಕೋಟಿ ಜನರಿಂದ ಅರ್ಜಿ ಸಂಗ್ರಹಿಸುವ ಅಭಿಯಾನ ಇದು. ಪ್ರತಿ ಗ್ರಾಮದಿಂದಲೂ ಜನರು ತಮ್ಮ ಅಭಿಪ್ರಾಯವನ್ನು ಅರ್ಜಿ ಮೂಲಕ ನೀಡಬೇಕು. ಇದಕ್ಕಾಗಿ ವ್ಯವಸ್ಥಿತ ಕಾರ್ಯ ನಡೆಯುತ್ತಿದೆ. ಹೀಗೆ ಎಲ್ಲಾ ಜಿಲ್ಲೆಗಳಿಂದ ಸಂಗ್ರಹಿಸಿದ ಅರ್ಜಿಗಳನ್ನು ಜನರ ಹಕ್ಕೊತ್ತಾಯದ ಮೇರೆಗೆ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾಗುತ್ತಿದೆ. ಇದರೊಂದಿಗೆ ಪ್ರಧಾನ ಮಂತ್ರಿಗಳಿಗೂ ಒಂದು ಪ್ರತಿ ಸಲ್ಲಿಸಲಾಗುವುದು ಎಂದರು.