Advertisement

ಬ್ಯಾಂಕುಗಳಿಗೆ 22,842 ಕೋಟಿ ವಂಚನೆ!

10:08 PM Feb 12, 2022 | Team Udayavani |

ನವದೆಹಲಿ: ಎಸ್‌ಬಿಐ ಬ್ಯಾಂಕ್‌ ಒಕ್ಕೂಟಕ್ಕೆ 22,842 ಕೋಟಿ ರೂ. ವಂಚನೆ ಮಾಡಿರುವ ಆರೋಪದಲ್ಲಿ ಎಬಿಜಿ ಶಿಪ್‌ಯಾರ್ಡ್‌ ಸಂಸ್ಥೆಯ ವಿರುದ್ಧ ಸಿಬಿಐ ಎಫ್ಐಆರ್‌ ದಾಖಲಿಸಿದೆ.

Advertisement

28 ಬ್ಯಾಂಕುಗಳಿಂದ ಸಾಲ ಪಡೆದು ವಂಚಿಸಿರುವುದಾಗಿ ಒಕ್ಕೂಟವು 2019ರ ನವೆಂಬರ್‌ನಲ್ಲೇ ದೂರು ನೀಡಿತ್ತು. 2020ರ ಆಗಸ್ಟ್‌ನಲ್ಲಿ ಮತ್ತೂಮ್ಮೆ ದೂರು ದಾಖಲಾಗಿದ್ದು, ಸಿಬಿಐ 2022ರ ಫೆ.7ರಂದು ಎಫ್ಐಆರ್‌ ದಾಖಲಿಸಿದೆ.

ಎಬಿಜಿ ಶಿಪ್‌ಯಾರ್ಡ್‌ ಜೊತೆಗೆ ಅದರ ನಿರ್ದೇಶಕರ ವಿರುದ್ಧವೂ ಎಫ್ಐಆರ್‌ ದಾಖಲಾಗಿದೆ. 2012-17ರ ಅವಧಿಯಲ್ಲಿ ಸಂಸ್ಥೆಯು ಅನೇಕ ಅವ್ಯವಹಾರ ನಡೆಸಿರುವುದಾಗಿ ಆಡಿಟ್‌ನಿಂದ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next