Advertisement

ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ಧ

06:10 AM Oct 27, 2017 | Team Udayavani |

ಬೆಂಗಳೂರು: ಅಬ್ದುಲ್‌ ಕರೀಂ ತೆಲಗಿ…2001ರಲ್ಲಿ ಮೊಟ್ಟಮೊದಲ ಬಾರಿಗೆ ಈ ಹೆಸರು ಮುನ್ನೆಲೆಗೆ ಬಂದ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ತಲ್ಲಣಗೊಂಡಿದ್ದವು. ದೇಶ ಇದುವರೆಗೂ ಕಂಡಿರದ ಬಹುಕೋಟಿ ಛಾಪಾಕಾಗದ ಹಗರಣ ನಡೆಸಿ ದೇಶದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಲು ಯತ್ನಿಸುತ್ತಿದ್ದ ಜಾಲವೊಂದು ಹೊರಗೆ ಬಂದಿತ್ತು.

Advertisement

ಈ ಕರಾಳ ದಂಧೆಯ ಕಿಂಗ್‌ಪಿನ್‌ ಕರೀಂ ತೆಲಗಿ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಹಾಗೂ ಪೊಲೀಸರ ರಾಜಾಶ್ರಯದಲ್ಲಿ ಬರೋಬ್ಬರಿ 12 ರಾಜ್ಯಗಳಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಸರ್ಕಾರಗಳಿಗೆ ವಂಚಿಸಿದ್ದರ ಕಿರು ವಿವರ ಹೀಗಿದೆ.

ಬೆಳಗಾವಿ ಜಿಲ್ಲೆ ಖಾನಾಪುರ ಮೂಲದ ತೆಲಗಿ ಬಿಕಾಂ ಪದವೀಧರನಾಗಿದ್ದು, ಮೊದಲು ರೈಲ್ವೆ ನಿಲ್ದಾಣಗಳಲ್ಲಿ ಕಡಲೆಕಾಳು ಹಾಗೂ ಸಿಹಿತಿನಿಸು ಮಾರಾಟಮಾಡಿಕೊಂಡಿದ್ದ. ಬಳಿಕ ಸೌದಿ ಅರೆಬಿಯಾಗೆ ತೆರಳಿ ಟ್ರಾವೆಲ್‌ ಏಜೆಂಟ್‌ ಆಗಿ ಕೆಲಸ ಮಾಡಿದ್ದ. ನಂತರ ಮುಂಬೈಗೆ ಮರಳಿದ ತೆಲಗಿ ನಾಸಿಕ್‌ನ ಸರ್ಕಾರಿ ಮುದ್ರಣಾಲಯದ ಕೆಲವು ಸಿಬ್ಬಂದಿ ಜತೆ ನಂಟು ಬೆಳೆಸಿ ನಕಲಿ ಛಾಪಾ ಕಾಗದ ಮುದ್ರಣ ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ಭೂಗತ ಲೋಕ ಹಾಗೂ ರಾಜಕೀಯ ನಾಯಕರ ನಂಟುಹೊಂದಿದ್ದ ತೆಲಗಿ ಛಾಪಾ ಕಾಗದ ದಂಧೆಯನ್ನು ನಿರಾತಂಕವಾಗಿ ನಡೆಸುತ್ತಿದ್ದ.

ಮುಂಬೈ ಮಾರುಕಟ್ಟೆಗೆ ಛಾಪಾ ಕಾಗದ: ನಾಸಿಕ್‌ ಮುದ್ರಣಾಲಯದಲ್ಲಿ ಸರ್ಕಾರಿ ಛಾಪಾ ಕಾಗದದ ಸೀರಿಯಲ್‌ ನಂಬರ್‌ಗಳ ಮಾಹಿತಿ ಪಡೆದು ಅದೇ ಸೀರಿಯಲ್‌ ನಂಬರ್‌ಗಳ ಛಾಪಾ ಕಾಗದ ಮುದ್ರಿಸಿ ಮುಂಬೈ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದ. ಕ್ರಮೇಣ ದಂಧೆಯ ಜಾಲವನ್ನು ಕರ್ನಾಟಕ, ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಿಗೆ ವಿಸ್ತರಿಸಿದ್ದ. ಬ್ಯಾಂಕ್‌, ವಿಮೆ ಕಂಪನಿ, ಷೇರು ವಹಿವಾಟು ಮಾಡುವವರಿಗೆ ಅಗತ್ಯವಾದ ಛಾಪಾ ಕಾಗದ ಕೆಲಸ ಮಾಡಲು 300ಕ್ಕೂ ಅಧಿಕ ಮಂದಿಯನ್ನು ನೇಮಕಮಾಡಿಕೊಂಡು ಸಾವಿರಾರು ಕೋಟಿ ರೂ. ವಂಚಿಸಿದ್ದ. ತೆಲಗಿ ವಿರುದಟಛಿ 1999ರಲ್ಲಿ ಮುಂಬೈ, ಪುಣೆಯಲ್ಲಿ ವಂಚನೆ ದೂರುಗಳು ದಾಖಲಾಗಿದ್ದರೂ, ಸಾಕ್ಷ್ಯಾಧಾರಗಳಿಲ್ಲದೆ ಬಂಧನವಾಗಿರಲಿಲ್ಲ. 

2001ರಲ್ಲಿ ಬಂಧನ: ನಕಲಿ ಛಾಪಾಕಾಗದ ದಂಧೆಯನ್ನು ಅವ್ಯಾಹತವಾಗಿ ನಡೆಸುತ್ತಿದ್ದ ಕರೀಂ ಲಾಲ್‌ ತೆಲಗಿಯನ್ನು ಮೊದಲ ಬಾರಿಗೆ 2001ರಲ್ಲಿ ಅಜೆ¾àರ್‌ನಲ್ಲಿ ಹೆಡೆಮುರಿ ಕಟ್ಟಿದ್ದರು. ಆ ಬಳಿಕವೇ ದೇಶದ ಆರ್ಥಿಕ ವ್ಯವಸ್ಥೆಗೇ ಗುನ್ನ ಇಟ್ಟಿದ್ದ ತೆಲಗಿ ನಡೆಸುತ್ತಿದ್ದ ದಂಧೆಯ ಸ್ವರೂಪ ಬಯಲಾಗಿತ್ತು. ಬಳಿಕ ಆಂಧ್ರಪ್ರದೇಶ, ಪುಣೆ, ಕರ್ನಾಟಕದ ಪೊಲೀಸರು ಆತನನ್ನು ವಶಕ್ಕೆ ಪಡೆದು ಕೋರ್ಟ್‌ಗೆ ಹಾಜರು ಪಡಿಸಿ, ವಿಚಾರಣೆ ನಡೆಸಿದಾಗ ಹಲವು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯಾಗಿತ್ತು.

Advertisement

ಜೈಲಿನಲ್ಲಿಯೇ ಡೀಲ್‌!: 2001ರಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆದ ತೆಲಗಿ ಆಗಿನ ಜೈಲಿನ ಅಧಿಕಾರಿಗಳಾಗಿದ್ದ ಪಿ.ಎನ್‌.ಜಯಸಿಂಹ ಹಾಗೂ ನಂಜಪ್ಪ ಅವರಿಗೆ ಹಣದ ಆಮಿಷ ತೋರಿ ವಿಶೇಷ ಸೌಲಭ್ಯ ಹಾಗೂ ಛಾಪಾ ಕಾಗದ ದಂಧೆ ನಡೆಸಲು ಅನುಕೂಲ ಪಡೆದುಕೊಂಡಿದ್ದ. ಈ ಪ್ರಕರಣದಲ್ಲಿ ಇಬ್ಬರೂ ಜೈಲು ಅಧಿಕಾರಿಗಳಿಗೆ ಜೈಲುಶಿಕ್ಷೆಯಾಗಿತ್ತು.

ರಾಜ್ಯ ಸರ್ಕಾರದ ಬುಡಕ್ಕೆ ಬಂದಿತ್ತು ಕೇಸ್‌! : ಛಾಪಾ ಕಾಗದ ಹಗರಣ ಕಿಂಗ್‌ಪಿನ್‌ ತೆಲಗಿ ಬಂಧನ ಅಂದಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೂ ಮುಜುಗರ ತಂದಿಟ್ಟಿತ್ತು. ಅಂದಿನ ಸಚಿವ ರೋಷನ್‌ ಬೇಗ್‌ ಸಹೋದರ ಕೂಡ ತೆಲಗಿ ಜೊತೆ ಸಂಪರ್ಕವಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಗಂಭೀರ ಆರೋಪ ಕೇಳಿಬಂದಿತ್ತು.ಈ ಪ್ರಕರಣದಲ್ಲಿ ರೋಷನ್‌ಬೇಗ್‌ ಸಹೋದರನಿಗೆ ಇತ್ತೀಚೆಗಷ್ಟೇ ಹೈಕೋರ್ಟ್‌ನಿಂದ ಕ್ಲೀನ್‌ಚಿಟ್‌ ಸಿಕ್ಕಿದೆ.

ರಾಜಕೀಯ ವಲಯದಲ್ಲಿ ಸಂಚಲನ
ಬೆಂಗಳೂರು:
ನಕಲಿ ಛಾಪಾ ಕಾಗದ ಹಗರಣ ಕೇವಲ ಪೊಲೀಸ್‌ ವಲಯದಲ್ಲಷ್ಟೇ ಅಲ್ಲದೆ ರಾಜಕೀಯ ವಲಯದಲ್ಲೂ ಬಹುಚರ್ಚಿತ
ವಿಷಯವಾಗಿತ್ತು.

ಏಕೆಂದರೆ, ಕರೀಂ ಲಾಲಾ ತೆಲಗಿಗೆ ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ಆಡಳಿತಾರೂಢ ಪಕ್ಷದ ರಾಜಕಾರಣಿಗಳ ಸಂಪರ್ಕ ಇತ್ತೆಂಬ ವಿಚಾರ ತನಿಖೆಯಲ್ಲಿ ಬಹಿರಂಗಗೊಂಡಿತ್ತು. ಜತೆಗೆ ಪೊಲೀಸ್‌ ಅಧಿಕಾರಿಗಳ ಜತೆಯೂ ತೆಲಗಿ ನಂಟು ಹೊಂದಿದ್ದ.

ನಕಲಿ ಛಾಪಾ ಕಾಗದ ಮಾರಾಟ ಜಾಲಕ್ಕೆ ಪೊಲೀಸ್‌ ರಕ್ಷಣೆ ಪಡೆದಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿತ್ತು. ಹೀಗಾಗಿ, ಕರೀಂಲಾಲಾ ತೆಲಗಿ ಬಂಧನವಾಗುತ್ತಿದ್ದಂತೆ ರಾಜಕೀಯ ಹಾಗೂ ಪೊಲೀಸ್‌ ವಲಯದಲ್ಲಿ ಸಂಚಲನ ಮೂಡಿಸಿತ್ತು.

2001ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದು ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ಗೃಹ ಸಚಿವರಾಗಿದ್ದರು. ಈ ವೇಳೆ ಕರೀಂಲಾಲಾ ತೆಲಗಿ ವಿಚಾರ ವಿಧಾನಸಭೆಯಲ್ಲೂ ಪ್ರಸ್ತಾಪವಾಗಿತ್ತು.

ಆಗ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದ ಜಗದೀಶ ಶೆಟ್ಟರ್‌ ಮತ್ತು ಮೇಲ್ಮನೆಯಲ್ಲಿ ಯಡಿಯೂರಪ್ಪನವರು ಸಚಿವ ರೋಷನ್‌
ಬೇಗ್‌ ಸಹೋದರನಿಗೆ ತೆಲಗಿ ಜತೆ ಸಂಪರ್ಕ ಇತ್ತು ಎಂಬ ಬಾಂಬ್‌ ಸಿಡಿಸಿದ್ದರು. ಇದು ರಾಜ್ಯಾದ್ಯಂತ ತೀವ್ರ ಕೋಲಾಹಲಕ್ಕೂ ಕಾರಣವಾಯಿತು. ಛಾಪಾ ಕಾಗದ ಹಗರಣದಲ್ಲಿ ಹಲವು ಪ್ರಭಾವಿಗಳ ಹೆಸರು ಕೇಳಿಬಂದಿತು. ಒಂದು ಹಂತದಲ್ಲಿ ಜೈಲಿನಲ್ಲಿದ್ದ ತೆಲಗಿ ಕೊಲೆಗೂ ಸಂಚು ಹೂಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ರೋಷನ್‌ಬೇಗ್‌ ಅವರು, ದೇಶದ್ರೋಹಕ್ಕೆ ಸಮನಾದ ನಕಲಿ ಛಾಪಾ ಕಾಗದ ಹಗರಣದಲ್ಲಿ ತಮ್ಮ ಸಹೊದರನ ಪಾತ್ರ ಇದ್ದರೆ
ನೇಣಿಗೆ ಏರಿಸಲಿ ಎಂದೂ ಹೇಳಿದ್ದರು. ರೋಷನ್‌ಬೇಗ್‌ ಸಹೋದರನ ವಿರುದಟಛಿದ ಆರೋಪ ಆಡಳಿತಾರೂಢ ಕಾಂಗ್ರೆಸ್‌
ಸರ್ಕಾರಕ್ಕೂ ಮುಜುಗರ ತಂದಿತ್ತು. 2001ರಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆದ ತೆಲಗಿ ಆಗಿನ ಜೈಲಿನ ಇಬ್ಬರು ಅಧಿಕಾರಿಗಳಿಗೆ ಹಣದ ಆಮಿಷ ತೋರಿ ವಿಶೇಷ ಸೌಲಭ್ಯ ಹಾಗೂ ಛಾಪಾ ಕಾಗದ ದಂಧೆ ನಡೆಸಲು ಅನುಕೂಲ ಪಡೆದುಕೊಂಡಿದ್ದ. ಇದಾದ ನಂತರ ತೆಲಗಿ ನಕಲಿ ಛಾಪಾ ಕಾಗದ ಹಗರಣದಲ್ಲಿ ತನಗೆ ಸಹಾಯ ಮಾಡಿದ ಪೊಲೀಸ್‌ ಹಾಗೂ ರಾಜಕಾರಣಿಗಳ ಹೆಸರು ಬಾಯ್ಬಿಟ್ಟಿದ್ದಾನೆ ಎಂಬ ಮಾತುಗಳು ಕೇಳಿಬಂದವು. ಆದರೆ, ಅದು ಬಹಿರಂಗವಾಗಲೇ ಇಲ್ಲ.

ರಾಜ್ಯಕ್ಕೆ ಹೇಗೆ ನಂಟು?
ರಾಜ್ಯದಲ್ಲಿಯೂ ನಕಲಿ ಛಾಪಾಕಾಗದ ನಡೆಸಲು ಬೆಂಗಳೂರನ್ನು ಕೇಂದ್ರವನ್ನಾಗಿ ಮಾಡಿಕೊಂಡಿದ್ದ ತೆಲಗಿ ರಾಜಕೀಯ ನಾಯಕರು, ಅವರ ಸಂಬಂಧಿಕರು ಹಾಗೂ ಪೊಲೀಸ್‌ ಅಧಿಕಾರಿಗಳ ಜೊತೆಯೇ ವ್ಯವಹಾರದ ನಂಟು ಇಟ್ಟುಕೊಂಡಿದ್ದ. ತೆಲಗಿ ವಂಚನೆ ಸಂಬಂಧ ಕಲಾಸಿಪಾಳ್ಯ, ಕೆ.ಆರ್‌.ಮಾರುಕಟ್ಟೆ, ಹಲಸೂರು ಗೇಟ್‌, ಉಪ್ಪಾರಪೇಟೆ ಸೇರಿ ಹಲವು ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ತೆಲಗಿ ಬಂಧನದ ಬಳಿಕ ಆತನ ವಿರುದಟಛಿ ಒಟ್ಟು 6 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು, ಈ ಪೈಕಿ ಕೆಲಪ್ರಕರಣಗಳಲ್ಲಿ ಅಧೀನ ನ್ಯಾಯಾಲಯ 2006ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next