ಪನಯಾಲ್ ಪೊಡಿಪಳ್ಳದಲ್ಲಿ ಜಿ.ಜಿ. ಸ್ಟೋರ್ ಅಂಗಡಿ ನಡೆಸುತ್ತಿರುವ ಎ.ಗೋಪಾಲನ್ ಅವರ ಪತ್ನಿ ಪದ್ಮಾವತಿ ಅವರ ಕತ್ತಿನಿಂದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ. ಪರಾರಿಯಾದ ಸ್ಕೂಟರ್‌ನ ದೃಶ್ಯ ಅಂಗಡಿ ಸಮೀಪದ ಸಿಸಿ ಟಿವಿಯಲ್ಲಿ ಪತ್ತೆಯಾಗಿದೆ. ಈ ಸ್ಕೂಟರ್‌ನ ನಂಬ್ರ ನಕಲಿ ಎಂಬುದಾಗಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
Advertisement
ಬಾರಾ ಮುಲ್ಲಚ್ಚೇರಿ ಆಯುರ್ವೇದ ಆಸ್ಪತ್ರೆ ಪರಿಸರದ ನೆಲ್ಲಿಯಡ್ಕ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೋರ್ವರ ಕತ್ತಿನಿಂದ ನಕಲಿ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾನೆ. ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ನಡೆದಿದೆ. ಈ ಎಲ್ಲ ಪ್ರಕರಣಗಳಲ್ಲಿ ಒಬ್ಬನೇ ಭಾಗಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಕುಂಬಳೆ: ಮನೆಯ ಟೆರೇಸ್ ಮೇಲಿನಿಂದ ಬಿದ್ದು ಮನೆಯೊಡೆಯ ಸಾವಿಗೀಡಾದ ಘಟನೆ ನಡೆದಿದೆ. ಪಾವೂರು ಜುಮಾ ಮಸೀದಿ ಬಳಿಯ ನಿವಾಸಿ ಮೊಹಮ್ಮದ್(64) ಸಾವಿಗೀಡಾದವರು. ಮನೆಯ ಟೆರೇಸ್‌ನ ಮೇಲೆ ನಿಂತಿದ್ದ ಮಳೆ ನೀರನ್ನು ತೆರವುಗೊಳಿಸಲೆಂದು ಮೊಹಮ್ಮದ್ ಟೆರೇಸ್ ಮೇಲೇರಿದ್ದರು. ಅಲ್ಲಿಂದ ಆಯ ತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
————————————————————————————————————–
ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು
ಕುಂಬಳೆ: ಸಂಶಯಾಸ್ಪದ ರೀತಿಯಲ್ಲಿ ಕಟ್ಟಡನಿಂದ ಬಿದ್ದು ಗಂಭೀರ ಗಾಯಗೊಂಡು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಟ್ಟೆಗೋಳಿ ನಿವಾಸಿ ಬಾಪ್ಟಿಸ್ಟ್ ಕ್ರಾಸ್ತಾ (59) ಸಾವಿಗೀಡಾದರು. ಮೇ 21 ರಂದು ರಾತ್ರಿ ಅಟ್ಟೆಗೋಳಿಯ ಕಟ್ಟಡವೊಂದರ ಮೇಲಿನಿಂದ ಬಿದ್ದಿದ್ದರು. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.