Advertisement

ಬಾಲಕಿಯ ಅಪಹರಣಕ್ಕೆ ಯತ್ನ: ಮೂವರು ಕಾಮಾಂಧರ ಬಂಧನ

03:54 PM Feb 14, 2018 | Team Udayavani |

ಪಾಲಘರ್‌ : ಶಾಲೆಗೆ ಹೋಗುವ ಹಾದಿಯಲ್ಲಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ ಆರೋಪದ ಮೇಲೆ ಪೊಲೀಸರು ಮೂವರನ್ನು ಬಂಧಿಸಿದ್ದು ಇನ್ನಿಬ್ಬರು ಬಾಲಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ವಸಾಯಿ ಪ್ರದೇಶದಲ್ಲಿ ಎಂದಿನಂತೆ ತನ್ನ ಶಾಲೆಗೆ ಹೋಗುತ್ತಿದ್ದ 8ನೇ ತರಗತಿಯ ವಿದ್ಯಾರ್ಥಿಯನ್ನು ಬೈಕ್‌ನಲ್ಲಿ ಬಂದ ಆರೋಪಿಗಳು ಅಡ್ಡ ಗಟ್ಟಿ. ಒಬ್ಟಾತ ಆಕೆಗೆ ಚೂರಿ ತೋರಿಸಿ ಪ್ರಾಣ ಬೆದರಿಕೆ ಹಾಕಿದಾಗ ಇನ್ನೊಬ್ಬ ಆಕೆಯನ್ನು ಸೆಳೆದುಕೊಂಡು ಪರಾರಿಯಾದ. 

ಆದರೆ ಹುಡುಗಿ ಹೇಗೋ ಅದೃಷ್ಟವಶಾತ್‌ ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡು ಪಾರಾದಳು. ಹುಡುಗಿಯ ಹೆತ್ತವರು ಪೊಲೀಸರಿಗೆ ದೂರು ನೀಡಿದರು. 

ಪೊಲೀಸರು ಆರೋಪಿಗಳನ್ನು ಬಂಧಿಸಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next