Advertisement

2 ವರ್ಷ, 8 ತಿಂಗಳು, 19 ದಿನಗಳ ನಂತರ ಕೋಮಾದಿಂದ ಹೊರಬಂದ ಫುಟ್ಬಾಲಿಗ

09:29 AM Mar 29, 2020 | keerthan |

ಆ್ಯಮ್‌ಸ್ಟರ್‌ಡಾಮ್‌ (ನೆದರ್ಲೆಂಡ್‌): ಎಲ್ಲ ಕಡೆ ಕೊರೊನಾ ವೈರಸ್‌ ದಾಳಿಯ ಸುದ್ದಿಗಳೇ ಕೇಳಿ ಬರುತ್ತಿವೆ. ಸತತ ಸಾವಿನ ಸುದ್ದಿಗಳ ನಡುವೆ ಅತ್ಯಂತ ಭರವಸೆಯ, ಸಂತಸದ ಸುದ್ದಿಯೊಂದು ಸಿಕ್ಕಿದೆ. 2 ವರ್ಷ 8 ತಿಂಗಳು, 19 ದಿನಗಳ ಹಿಂದೆ ಕೋಮಾಕ್ಕೆ ಜಾರಿದ್ದ ನೆದರ್ಲೆಂಡ್‌ನ‌ ಫ‌ುಟ್‌ಬಾಲಿಗ ಅಬ್ಧೆಲ್‌ಹಾಕ್‌ ನೌರಿ ಚೇತರಿಸಿಕೊಂಡಿದ್ದಾರೆ.

Advertisement

ಅವರು ಬಾಹ್ಯ ಜಗತ್ತಿಗೆ ಸ್ಪಂದಿಸುತ್ತಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವರಿನ್ನು ಗಾಲಿಕುರ್ಚಿಯಲ್ಲಿ ಚಲಿಸಲಿದ್ದಾರೆ. ಸದ್ಯದ ಮಟ್ಟಿಗೆ ಇದನ್ನೊಂದು ಪವಾಡವೆಂದೇ ಹೇಳಬೇಕು. ಅಂತಹ ದುರ್ಘ‌ಟನೆಗೆ ನೌರಿ ಒಳಗಾಗಿದ್ದರು.

ಘಟನೆ ಏನು?:
ನೆದರ್ಲೆಂಡ್‌ನ‌ ಅಜಾಕ್ಸ್‌ ಕ್ಲಬ್‌ ತಂಡದ ತಾರಾ ಆಟಗಾರರಾಗಿದ್ದ ನೌರಿ, ತಮ್ಮ 20ನೇ ವಯಸ್ಸಿನಲ್ಲಿ ಮೈದಾನದಲ್ಲೇ ಹೃದಯಘಾತಕ್ಕೊಳಗಾಗಿದ್ದರು. 2017, ಜು.8ರಂದು ಜರ್ಮನಿಯ ವೆರ್ಡರ್‌ ಬ್ರೆಮನ್‌ ಕ್ಲಬ್‌ ವಿರುದ್ಧ ಆಸ್ಟ್ರಿಯದಲ್ಲಿ ನಡೆದ ಪಂದ್ಯದಲ್ಲಿ ದಿಢೀರನೆ ಅವರು ಕುಸಿದುಬಿದ್ದಿದ್ದರು. ಆ ವೇಳೆ ಮೈದಾನದಲ್ಲಿದ್ದ ವೈದ್ಯರು ಸೂಕ್ತ ಚಿಕಿತ್ಸೆ ನೀಡಲಿಲ್ಲ ಎಂದು ಅವರನ್ನು ಪದಚ್ಯುತಿ ಮಾಡಲಾಗಿತ್ತು. ತಕ್ಷಣ ವಿಮಾನದಲ್ಲಿ ಒಯ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಶಾಶ್ವತವಾಗಿ ಮೆದುಳಿನ ಆಘಾತಕ್ಕೆ ಒಳಗಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next