Advertisement

ಕೋವಿಡ್-19 ಹೋರಾಟಕ್ಕಾಗಿ ಬ್ಯಾಟ್, ಜೆರ್ಸಿ ಹರಾಜು ಹಾಕಲಿರುವ ಎಬಿಡಿ- ಕೊಹ್ಲಿ

03:12 PM Apr 25, 2020 | Team Udayavani |

ಮುಂಬೈ: ಕೋವಿಡ್-19 ಸೋಂಕು ವಿರುದ್ಧ ಹೋರಾಟಕ್ಕೆ ಆರ್ ಸಿಬಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಎ ಬಿ ಡಿವಿಲಿಯರ್ಸ್ ಜೊತೆಯಾಗಿದ್ದಾರೆ. 2016ರ ಐಪಿಎಲ್ ನಲ್ಲಿ ಶತಕ ಸಿಡಿಸಿದ್ದ ಪಂದ್ಯದ ಬ್ಯಾಟ್, ಜೆರ್ಸಿ ಮತ್ತು ಕಿಟ್ ಗಳನ್ನು ಹರಾಜು ಹಾಕಲು ಉಭಯ ಆಟಗಾರರು ನಿರ್ಧರಿಸಿದ್ದಾರೆ.

Advertisement

ಇನ್ಸ್ಟಾಗ್ರಾಮ್ ಲೈವ್ ಎಬಿಡಿ ಈ ಕುರಿತು ಹೇಳಿದರು. 2016ರ ಗುಜರಾತ್ ಲಯನ್ಸ್ ಪಂದ್ಯದಲ್ಲಿ ಬಳಿಸಿದ ಬ್ಯಾಟ್, ಜೆರ್ಸಿ ಹಾಗೂ ಗ್ಲೌಸ್ ಅನ್ನು ಹರಾಜು ಹಾಕುವುದಾಗಿ ಎಬಿಡಿ ಹೇಳಿದರು. ಇದಕ್ಕೆ ಸಹಮತ ಸೂಚಿಸಿದ ಕೊಹ್ಲಿ ತಾನೂ ಪಾಲ್ಗೊಳ್ಳುವುದಾಗಿ ಸೂಚಿಸಿದರು.

2016ರಲ್ಲಿ ನಡೆದ ಆ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ (120) ಮತ್ತು ವಿರಾಟ್ ಕೊಹ್ಲಿ(109)  ಇಬ್ಬರೂ ಆಕರ್ಷಕ ಶತಕ ದಾಖಲಿಸಿದ್ದರು. ಆ ಪಂದ್ಯದಲ್ಲಿ ಗೋ ಗ್ರೀನ್’ ಅಭಿಯಾನದ ಹಿನ್ನೆಲೆಯಲ್ಲಿ ಆರ್’ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿದಿತ್ತು. ಈ ಕ್ಷಣವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಕಿಟ್ ಹರಾಜಿಗೆ ಎಬಿಡಿ ಚಿಂತನೆ ಮಾಡಿದ್ದಾರೆ. ಹರಾಜಿನ ಹಣ ಸಮಾನವಾಗಿ ಭಾರತ-ದ.ಆಫ್ರಿಕಾದ ಕೋವಿಡ್-19 ಪರಿಹಾರ ನಿಧಿಗೆ ದೇಣಿಗೆ  ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next