Advertisement
ಆಂಧ್ರಪ್ರದೇಶದ ಮಾದರಿಯಲ್ಲಿ ಮಿನಿ ಟೆಂಪೋ ಅಥವಾ ಸರಕು ಸಾಗಣೆ ಆಟೋ ಗಳ ಮೂಲಕ ಕಾರ್ಡ್‌ದಾರರ ಮನೆಗೇ ಪಡಿತರ ಪೂರೈಸಲು ಎರಡು ಹಂತದ ಸಭೆ ನಡೆದಿತ್ತಾದರೂ ದಿಢೀರನೆ ಯೋಜನೆ ಕೈ ಬಿಡಲು ನಿರ್ಧರಿಸಲಾಗಿದೆ.
Related Articles
Advertisement
ಏನಿದು ಯೋಜನೆ?ಆಂಧ್ರದಲ್ಲಿ ಮನೆಬಾಗಿಲಿಗೆ ಪಡಿತರ ಪೂರೈಸುತ್ತಿದ್ದು, ಇದರಿಂದ ಪಡಿತರದಾರರು ಪ್ರತೀ ತಿಂಗಳು ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲು ನಿಲ್ಲುವುದು ತಪ್ಪುತ್ತಿದೆ. ಗುಡ್ಡಗಾಡು ಪ್ರದೇಶ ಹಾಗೂ ಗ್ರಾಮಾಂತರ ಭಾಗದಲ್ಲಿ ನ್ಯಾಯಬೆಲೆ ಅಂಗಡಿಗೆ ಕಿ.ಮೀ. ಗಟ್ಟಲೆ ದೂರ ಬರುವುದೂ ತಪ್ಪುತ್ತಿದೆ. ಕೈಬಿಡಲು ಕಾರಣವೇನು?
01ಸರಕಾರಕ್ಕೆ ಆರ್ಥಿಕವಾಗಿ ಹೊರೆಯಾಗುವ ಆತಂಕ
02ಪಾರದರ್ಶಕ ಪಡಿತರ ಪೂರೈಕೆ ಹಾಗೂ ನಿಗಾ ವಹಿಸುವುದು ಕಷ್ಟವಾಗಬಹುದು ಎಂಬ ಅಭಿಪ್ರಾಯ
03 ವಾಹನ ಹೋಗುವ ಸಮಯಕ್ಕೆ ಪಡಿತರದಾರರು ಮನೆಯಲ್ಲಿ ಇರದಿದ್ದರೆ ಹೇಗೆ ಎಂಬ ಪ್ರಶ್ನೆ
04 ನ್ಯಾಯಬೆಲೆ ಅಂಗಡಿ ವ್ಯವಸ್ಥೆ ಹಾಗೂ ಮನೆಗೆ ಪಡಿತರ ಪೂರೈಕೆ ಎರಡನ್ನೂ ಮುಂದು ವರಿಸುವುದು ಕಷ್ಟ ಎಂಬ ಅಭಿಪ್ರಾಯ
05 ನ್ಯಾಯಬೆಲೆ ಅಂಗಡಿ ಮಾಲಕರ ವಿರೋಧ ನ. 1ರಂದೇ ಜಾರಿಯಾಗಬೇಕಿತ್ತು
ರಾಜ್ಯದಲ್ಲಿ 1.15 ಕೋಟಿ ಬಿಪಿಎಲ್, 21 ಲಕ್ಷ ಎಪಿಎಲ್, 10.89 ಲಕ್ಷ ಅಂತ್ಯೋದಯ ಸೇರಿ 1.47 ಕೋಟಿ ಪಡಿತರ ಕಾರ್ಡ್‌ಗಳಿದ್ದು ಎಲ್ಲರಿಗೂ ಮನೆ ಬಾಗಿಲಿಗೆ ಪಡಿತರ ಪೂರೈಸಲು ನಿರ್ಧರಿಸಲಾಗಿತ್ತು. 19,963 ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೊಳಿಸಲು ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆದು ಚರ್ಚಿಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನ. 1ರಂದು ಕರ್ನಾಟಕ ರಾಜ್ಯೋತ್ಸವದಂದು ಯೋಜನೆ ಜಾರಿಗೆ ಬರಬೇಕಿತ್ತು. -ಎಸ್. ಲಕ್ಷ್ಮಿನಾರಾಯಣ