ದುಬೈ: ಐಸಿಸಿ ಟಿ20 ವಿಶ್ವಕಪ್ ನಲ್ಲಿ ಆ್ಯರೋನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಜಯಭೇರಿ ಬಾರಿಸಿದೆ. ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎಂಟು ವಿಕೆಟ್ ಅಂತರದಿಂದ ಸೋಲಿಸಿದ ಆಸೀಸ್ ಮೊದಲ ಬಾರಿಗೆ ಚುಟುಕು ಮಾದರಿಯ ವಿಶ್ವಕಪ್ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್ 172 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಆಸೀಸ್ ಗೆ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಶ್ ಬ್ಯಾಟಿಂಗ್ ನಲ್ಲಿ ನೆರವಾದರು. ಕೇವಲ ಎರಡು ವಿಕೆಟ್ ಕಳೆದುಕೊಂಡು 19ನೇ ಓವರ್ ನಲ್ಲಿ ಜಯದ ಗೆರೆ ದಾಟಿತು.
ಪಂದ್ಯದ ಬಳಿಕ ಮಾತನಾಡಿದ ನಾಯಕ ಫಿಂಚ್, ಕೆಲವು ವಾರಗಳ ಹಿಂದೆ ವಾರ್ನರ್ ಬಗ್ಗೆ ಹಲವರು ಬರೆದಿದ್ದರು. ಆತನನ್ನು ಕೆಣಕುವುದು ಕರಡಿಯನ್ನು ಚುಚ್ಚಿದಂತೆ ಎಂದು ಹೇಳಿದರು.
ಇದನ್ನೂ ಓದಿ:ವಿಶ್ವಕಪ್ ಗೆಲುವಿನ ಸಂತಸದಲ್ಲೇ ಹೊಸ ದಾಖಲೆ ಬರೆದ ಡೇವಿಡ್ ವಾರ್ನರ್
ಕಳಪೆ ಫಾರ್ಮ್ ನಿಂದ ಐಪಿಎಲ್ ನಿಂದಲೂ ಹೊರಬಿದ್ದಿದ್ದ ಡೇವಿಡ್ ವಾರ್ನರ್ ವಿಶ್ವಕಪ್ ನಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದ್ದರು. ಸರಣಿ ಶ್ರೇಷ್ಠ ಪ್ರಶಸ್ತಿ ಕೂಡಾ ವಾರ್ನರ್ ಪಾಲಾಗಿದೆ.