Advertisement

ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಆಸೀಸ್ ನಾಯಕ ಆ್ಯರೋನ್ ಫಿಂಚ್

09:51 AM Sep 10, 2022 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯಾ ಸೀಮಿತ ಓವರ್ ಗಳ ನಾಯಕ ಆ್ಯರೋನ್ ಫಿಂಚ್ ಅವರು ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ರವಿವಾರ ನ್ಯೂಜಿಲ್ಯಾಂಡ್ ವಿರುದ್ಧ ತಾನು ಅಂತಿಮ ಏಕದಿನ ಪಂದ್ಯವಾಡಲಿದ್ದೇನೆ ಎಂದು ಬಲಗೈ ಆಟಗಾರ ಫಿಂಚ್ ಹೇಳಿದ್ದಾರೆ.

Advertisement

” ಕೆಲವು ಉತ್ತಮ ನೆನಪುಗಳೊಂದಿಗೆ ಇದೊಂದು ಅದ್ಭುತ ಸವಾರಿ. ಅದ್ಭುತ ಏಕದಿನ ತಂಡದ ಭಾಗವಾಗಲು ನಾನು ಅದೃಷ್ಟಶಾಲಿಯಾಗಿದ್ದೇನೆ.” ಎಂದು ಫಿಂಚ್ ಹೇಳಿದರು.

ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಫಿಂಚ್, ತಾನು ಟಿ20 ಕ್ರಿಕೆಟ್ ನಲ್ಲಿ ಮುಂದುವರಿಯುದಾಗಿ ಹೇಳಿದ್ದಾರೆ. ಟಿ20 ತಂಡದ ನಾಯಕನಾಗಿ ಫಿಂಚ್ ಮುಂದುವರಿಯಲಿದ್ದಾರೆ.

“ಮುಂದಿನ ಏಕದಿನ ವಿಶ್ವಕಪ್‌ಗೆ ಸಿದ್ಧರಾಗಲು ಮತ್ತು ಗೆಲ್ಲಲು ಹೊಸ ನಾಯಕನಿಗೆ ಉತ್ತಮ ಅವಕಾಶವನ್ನು ನೀಡುವ ಸಮಯ ಇದು. ಈ ಹಂತದವರೆಗಿನ ನನ್ನ ಪ್ರಯಾಣಕ್ಕೆ ಸಹಾಯ ಮಾಡಿದ ಮತ್ತು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ.” ಎಂದು ಆ್ಯರೋನ್ ಫಿಂಚ್ ಹೇಳಿದ್ದಾರೆ.

ಇದನ್ನೂ ಓದಿ:‘ಲಕ್ಕಿಮ್ಯಾನ್’ ಚಿತ್ರ ವಿಮರ್ಶೆ: ದೇವರ ಆಟದಲ್ಲಿ ಲಕ್ಕಿ ಮ್ಯಾನ್‌ ಮಿಂಚು

Advertisement

ಆ್ಯರೋನ್ ಫಿಂಚ್ ಅವರು ಏಕದಿನ ಕ್ರಿಕೆಟ್ ನಲ್ಲಿ ಕಳಪೆ ಫಾರ್ಮ್ ನಲ್ಲಿದ್ದಾರೆ. ಈ ವರ್ಷದ ಆಡಿದ 13 ಇನ್ನಿಂಗ್ಸ್ ಗಳಲ್ಲಿ ಅವರು ಗಳಿಸಿದ್ದು ಕೇವಲ 169 ರನ್. ಅದರಲ್ಲೂ ಕಳೆದ 12 ಇನ್ನಿಂಗ್ಸ್ ಗಳಲ್ಲಿ ಐದರಲ್ಲಿ ಅವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

2013ರಲ್ಲಿ ಶ್ರೀಲಂಕಾ ವಿರುದ್ಧ ಪದಾರ್ಪಣೆ ಮಾಡಿದ ಫಿಂಚ್, 17 ಶತಕ ಸಹಿತ 5400 ರನ್ ಗಳಿಸಿದ್ದಾರೆ. ಆಸೀಸ್ ಪರ ಅತೀ ಹೆಚ್ಚು ಏಕದಿನ ಶತಕ ಬಾರಿಸಿದವರ ಪೈಕಿ ಫಿಂಚ್ ಮೂರನೇ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next