Advertisement

‘ಆರೋಗ್ಯ ಸೇತು’ಆ್ಯಪ್‌ ಡೌನ್‌ ಲೋಡ್‌ನ‌ಲ್ಲಿ  ದಾಖಲೆ

01:31 AM Apr 18, 2020 | Hari Prasad |

ಹೊಸದಿಲ್ಲಿ: ಕೋವಿಡ್ ಸೋಂಕಿತರ ಬಗ್ಗೆ ಅಲರ್ಟ್‌ ಮಾಡುವ ಮೊಬೈಲ್‌ ಅಪ್ಲಿಕೇಷನ್‌ ಆದ ಆರೋಗ್ಯ ಸೇತು, ವಿಶ್ವದಲ್ಲೇ ಅತಿ ವೇಗವಾಗಿ ಹೆಚ್ಚು ಜನರನ್ನು ಮುಟ್ಟಿದ ಆ್ಯಪ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Advertisement

ಕೇವಲ 13 ದಿನದಲ್ಲಿ 5 ಕೋಟಿ ಜನರು ಈ ಆ್ಯಪ್‌ ಡೌನ್‌ಲೋಡ್‌ ಮಾಡಿದ್ದಾರೆ’ ಎಂದು ನೀತಿ ಆಯೋಗದ ಮುಖ್ಯಸ್ಥ ಅಮಿತಾಭ್‌ ಕಾಂತ್‌ ತಿಳಿಸಿದ್ದಾರೆ.

‘ಟೆಲಿಫೋನ್‌ಗೆ 5 ಕೋಟಿ ಜನರನ್ನು ಮುಟ್ಟಲು 75 ವರ್ಷಗಳೇ ಬೇಕಾದವು. ರೇಡಿಯೋಗೆ ಇಷ್ಟೇ ಜನರನ್ನು ಮುಟ್ಟಲು 38 ವರ್ಷ ಬೇಕಾಯಿತು.

ಇನ್ನು, ಟಿವಿಯು 5 ಕೋಟಿ ಜನರನ್ನು ಮುಟ್ಟಲು 13 ವರ್ಷ ಹಿಡಿದರೆ, ಇಂಟರ್ನೆಟ್‌ಗೆ 4 ವರ್ಷ, ಫೇಸ್‌ಬುಕ್‌ಗೆ 19 ತಿಂಗಳು, ಪೋಕಮನ್‌ ಗೋ ಆ್ಯಪ್‌ಗೆ 19 ದಿನಗಳು ಬೇಕಾದವು. ಆದರೆ, ಆರೋಗ್ಯ ಸೇತುವಿಗೆ ಕೇವಲ 15 ದಿನಗಳು ಸಾಕಾದವು’ ಎಂದು ಅಮಿತಾಭ್‌ ಕಾಂತ್‌ ಹೊಸದಿಲ್ಲಿಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next