Advertisement
ಶೀಶ್ ಮಹಲ್ ಆರೋಪಗಳು ಸುಳ್ಳು ಎಂದು ಸಾಬೀತು ಪಡಿಸಲು ಸಚಿವ ಸೌರಭ್ ಭಾರದ್ವಾಜ್ ಮತ್ತು ಸಂಸದ ಸಂಜಯ ಸಿಂಗ್ ವಿಡಿಯೋಗ್ರಾಫರ್ಗಳ ಜತೆಗೆ ಫ್ಲ್ಯಾಗ್ಶಿಪ್ ರಸ್ತೆಯಲ್ಲಿರುವ ಮನೆಯನ್ನು ಪ್ರವೇಶಿಸಲು ಮುಂದಾದರು. ಆದರೆ ಪೊಲೀಸರು ಇದಕ್ಕೆ ಅಡ್ಡಿಪಡಿಸಿದ ಕಾರಣ, ಕೆಲ ಕಾಲ ಪ್ರತಿಭಟನೆ ನಡೆಸಿ, ಪ್ರಧಾನಿ ಮೋದಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ತೆರಳಿದರು. ಆದರೆ ದಾರಿಯಲ್ಲೇ ಅವರನ್ನು ತಡೆದ ಪೊಲೀಸರು ವಾಪಸ್ ಕಳುಹಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಪ್ ನಾಯಕರು ಹಿಂದಿರುಗಿದರು.
ಮತ್ತೂಂದಡೆ ಆಪ್ ನಡೆಸಿರುವ ಪ್ರತಿಭಟನೆಗೆ ಪ್ರತಿಯಾಗಿ ಬಿಜೆಪಿ ನಾಯಕರು ಮಥುರಾ ರಸ್ತೆಯಲ್ಲಿರುವ, ಆತಿಷಿ ಅವರಿಗೆ ಹಂಚಿಕೆ ಮಾಡಿರುವ ಮನೆಯತ್ತ ತೆರಳಿ ಪ್ರತಿಭಟನೆ ನಡೆಸಿದರು. ಇವರೂ ಸಹ ವಿಡಿಯೋಗ್ರಾಫರ್ಗಳನ್ನು ಕರೆದೊಯ್ದಿದ್ದರು. ಆತಿಷಿ ಅವರಿಗೆ ಈಗಾಗಲೇ ಮನೆ ನೀಡಲಾಗಿದೆ ಎಂಬುದನ್ನು ಜನರಿಗೆ ತೋರಿಸುವುದು ಅವರ ಉದ್ದೇಶವಾಗಿತ್ತು. ಆತಿಷಿ ಅವರಿಗೆ ಮನೆ ನೀಡಿದ್ದರೂ ಸಹ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದರು. ಶೀಶ್ ಮಹಲ್ ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ
ಅರವಿಂದ ಕೇಜ್ರಿವಾಲ್ ಸಿಎಂ ಆಗಿದ್ದಾಗ ಅವರು 40 ಕೋಟಿ ರೂ. ಖರ್ಚು ಮಾಡಿ ನವೀಕರಣ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿರುವ “ಶೀಶ್ಮಹಲ್’ಗೆ ಸಂಬಂಧಿಸಿದ ವಿಡಿಯೋವೊಂದನ್ನು ಬಿಜೆಪಿ ಬುಧವಾರ ಬಿಡುಗಡೆ ಮಾಡಿದೆ. ಈ ನಿವಾಸದಲ್ಲಿ 5 ಕೋಟಿ ಬೆಲೆ ಬಾಳುವ ಕರ್ಟನ್, 1 ಕೋಟಿ ರೂ. ಬೆಲೆ ಬಾಳುವ ರೇಲಿಂಗ್ಸ್, 70 ಲಕ್ಷ ರೂ.ನ ಸ್ವಯಂಚಾಲಿತ ಬಾಗಿಲು, 65 ಲಕ್ಷ ರೂ. ಟೀವಿ, 9 ಲಕ್ಷ ರೂ.ನ ಫ್ರಿಡ್ಜ್ ಸೇರಿ ಹಲವು ಐಶಾರಾಮಿ ವಸ್ತುಗಳಿವೆ ಎಂದು ಹೇಳಿದೆ.
Related Articles
Advertisement