Advertisement
ದೆಹಲಿಯಲ್ಲಿ ಎಎಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಅತಿಯಾದ ಆತ್ಮವಿಶ್ವಾಸ ಹೊಂದಿರುವ ಕಾಂಗ್ರೆಸ್ ಮತ್ತು ಸೊಕ್ಕಿನ ಬಿಜೆಪಿ ವಿರುದ್ಧ ಏಕಾಂಗಿಯಾಗಿ ಹೋರಾಡಲು ನಾವು ಸಮರ್ಥರಾಗಿದ್ದೇವೆ ಎಂದು ಎಎಪಿ ವಕ್ತಾರೆ ಪ್ರಿಯಾಂಕಾ ಕಕ್ಕರ್ ಬುಧವಾರ(ಅ9)ಹೇಳಿದ್ದಾರೆ.
Related Articles
Advertisement
“ಕಳೆದ 10 ವರ್ಷಗಳಿಂದ ದೆಹಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಒಂದೂ ಸ್ಥಾನವನ್ನೂ ಹೊಂದಿಲ್ಲವಾದರೂ ನಾವು ಲೋಕಸಭೆ ಚುನಾವಣೆಯಲ್ಲಿಮೂರು ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದೆವು. ಹರ್ಯಾಣದಲ್ಲಿ ಮಿತ್ರಪಕ್ಷಗಳನ್ನು ಬಿಟ್ಟು ಹೋಗುವ ಅಗತ್ಯವಿರಲಿಲ್ಲ. I.N.D.I.A ಎಲ್ಲಾ ಪ್ರಯತ್ನಗಳನ್ನು ಕಾಂಗ್ರೆಸ್ ವಿಫಲಗೊಳಿಸಿದೆ ಎಂದು ಕಕ್ಕರ್ ತೀವ್ರ ಅಸಮಾಧಾನ ಹೊರ ಹಾಕಿದರು.
ಹರಿಯಾಣದಲ್ಲಿ ಲೋಕಸಭೆ ಚುನಾವಣೆಯನ್ನು ಒಟ್ಟಿಗೆ ಎದುರಿಸಿದ್ದ ಎಎಪಿ ಮತ್ತು ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಯಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ಎಎಪಿ ಮತ್ತು ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವಲ್ಲಿ ವಿಫಲವಾಗಿತ್ತು. ಹರ್ಯಾಣದಲ್ಲಿ ಎಎಪಿ ಸ್ಪರ್ಧಿಸಿದ ಎಲ್ಲಾ ಸ್ಥಾನಗಳಲ್ಲಿ ಸೋತಿದೆ. ಕಾಂಗ್ರೆಸ್ ಅನಿರೀಕ್ಷಿತ ಸೋಲು ಅನುಭವಿಸಿ ಆಡಳಿತಾರೂಢ ಬಿಜೆಪಿಗೆ ಸತತ ಮೂರನೇ ಬಾರಿಗೆ ಮರಳಲು ದಾರಿ ಮಾಡಿಕೊಟ್ಟಿತು.