Advertisement

ನಗರಸಭೆ ಚುನಾವಣೆಗೆ ಆಮ್‌ಆದ್ಮಿ ಪಕ್ಷ ಕಣಕ್ಕೆ

04:07 PM Dec 02, 2021 | Team Udayavani |

 ಚಿಕ್ಕಮಗಳೂರು: ಡಿಸೆಂಬರ್‌ 27ರಂದು ನಗರಸಭೆ ಚುನಾವಣೆ ನಡೆಯಲಿದ್ದು, ನಗರದ 35 ವಾರ್ಡ್‌ ಗಳಲ್ಲೂ ಆಮ್‌ಆದ್ಮಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಆಮ್‌ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಡಾ| ಸುಂದರ್‌ಗೌಡ ತಿಳಿಸಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭೆಯ ಆಡಳಿತ ಕುಸಿದಿದೆ. ಅಮೃತ್‌ ಯೋಜನೆ, ಯುಜಿಡಿ, ಕಸವಿಲೇವಾರಿ ಸೇರಿದಂತೆ ಜನತೆಗೆ ಸರ್ಕಾರದ ಸೇವೆಯನ್ನು ಸಮರ್ಪಕವಾಗಿ ನೀಡುವಲ್ಲಿ ಈ ಹಿಂದೆ ನಗರಸಭೆ ಅ ಧಿಕಾರ ಹಿಡಿದಿದ್ದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ವಿಫಲವಾಗಿದ್ದು, ಜನರು ಉತ್ತಮ ಆಡಳಿತದ ನಿರೀಕ್ಷೆಯಲ್ಲಿದ್ದಾರೆ. ಅದರಂತೆ 35 ವಾರ್ಡ್‌ಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಣಾಯ ಕೈಗೊಳ್ಳಲಾಗಿದೆ ಎಂದರು.

ಈಗಾಗಲೇ ಶೇ.50ರಷ್ಟು ಅಭ್ಯರ್ಥಿಗಳನ್ನು ಗುರುತಿಸಲಾಗಿದ್ದು, ಉಳಿದ ಅಭ್ಯರ್ಥಿಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಅಭ್ಯರ್ಥಿಗಳು ಪ್ರಾಮಾಣಿಕರಾಗಿದ್ದು, ಜಾತಿ, ಧರ್ಮ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಬದ್ಧರಾಗಿರಬೇಕು. ಅಭ್ಯರ್ಥಿಗಳ ಹಿನ್ನೆಲೆಯನ್ನು ಪರಿಗಣಿಸಿ ಸೇವಾ ಮನೋಭಾವ ಉಳ್ಳವರಿಗೆ ಚುನಾವಣೆಯಲ್ಲಿ ಸ್ಪ ರ್ಧಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಆಮ್‌ಆದ್ಮಿ ಪಕ್ಷ ಸೇರಬಯಸುವ ಅಥವಾ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸುವವರು ಪಕ್ಷದ ಜಿಲ್ಲಾಧ್ಯಕ್ಷರ ಮೊ.ಸಂಖ್ಯೆ 9448186237, ಜಿಲ್ಲಾ ಕಾರ್ಯದರ್ಶಿ ಮೊ.ಸಂಖ್ಯೆ 9379075756 ಹಾಗೂ ಸಂಚಾಲಕ ರಂಗಪ್ಪ ಅವರ ಮೊ.ಸಂಖ್ಯೆ 9845768625ಗೆ ಸಂಪರ್ಕಿಸುವಂತೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಆಪ್‌ಪಕ್ಷದ ಮುಖಂಡರಾದ ಮೋಹನ್‌, ರಂಗಪ್ಪ, ಪವನ್‌, ಅಂತೋಣಿ, μಲೋಮಿನಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next