Advertisement

ಗೋವಾ ಅಸೆಂಬ್ಲಿ ಬೈಪೋಲ್‌: ಎಲ್ಲ 3 ಕ್ಷೇತ್ರಗಳಲ್ಲಿ ಆಪ್‌ ಸ್ಪರ್ಧೆ

06:39 AM Mar 14, 2019 | udayavani editorial |

ಪಣಜಿ: ಮುಂದಿನ ತಿಂಗಳಲ್ಲಿ  ನಡೆಯಲಿರುವ ಗೋವಾ ವಿಧಾನ ಸಭೆಯ ಉಪ ಚುನಾವಣೆಯಲ್ಲಿ ತಾನು ಎಲ್ಲ ಮೂರು ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಆಮ್‌ ಆದ್ಮಿ ಪಕ್ಷ ಇಂದು ಗುರುವಾರ ಹೇಳಿದೆ. 

Advertisement

ಶಿರೋಡ, ಮಾಂದ್ರೆಂ ಮತ್ತು ಮಾಪುಸಾ ವಿಧಾನಸಭಾ ಕ್ಷೇತ್ರಗಳ ಉಪ ಚುನವಾಣೆಗೆ ಸ್ಪರ್ಧಿಸಲು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಈಗ ರಚಿಸಲಾಗುತ್ತಿದೆ ಎಂದು ಆಪ್‌ ಗೋವಾ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಪಡಗಾಂವ್‌ಕರ್‌ ತಿಳಿಸಿದ್ದಾರೆ. 

ಲೋಕಸಭಾ ಚುನಾವಣೆಯ ಜತೆಗೇ ನಡೆಯುವ ಈ ಉಪಚುನಾವಣೆಗಳಿಗೆ ಎ.23ರಂದು ಮತದಾನ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next