ಕನಕಗಿರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಚಿವ ಶಿವರಾಜ್ ತಂಗಡಗಿ ಮಂತ್ರಿಯಾಗಿ ಮೂರು ತಿಂಗಳು ಕಳೆಯಿತು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆ.12ರ ಗುರುವಾರ ‘ಬನ್ನಿ ಮಾತನಾಡೋಣ’ ಎಂಬ ಕಾರ್ಯಕ್ರಮದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಚಿವ ಶಿವರಾಜ್ ತಂಗಡಗಿ ಮಂತ್ರಿಯಾಗಿ ಮೂರು ತಿಂಗಳು ಕಳೆಯಿತು. ಕನ್ನಡ ಮತ್ತು ಸಂಸ್ಕೃತಿ 50ನೇ ವರ್ಷದ ವಾರ್ಷಿಕೋತ್ಸವಕ್ಕೆ ಸಬಂಧಕ್ಕೆ ಹಲವಾರು ಬಾರಿ ಪೂರ್ವಭಾವಿ ಸಭೆ ನಡೆಸಿದ್ದಾರೆ ಎಂದರು.
ಇದು ಪೂರ್ವಭಾವಿ ಸಭೆಗೆ ಮಾತ್ರವಷ್ಟೇ ಸೀಮಿತವಾಗಿತ್ತು ಹೊರತು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಕೂಡಾ ಇಲಾಖೆಯ ಬಜೆಟ್ ತರುವಲ್ಲಿ ಅಸಮಾರ್ಥರಾಗಿದ್ದಾರೆ ಎಂದು ದೂರಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಬಂಧಪಟ್ಟ 14 ಅಕಾಡೆಮಿಗಳು ಇವೆ. ಜಾನಪದ ಕಲಾವಿದರ ಮಾಶಾಸನ ಕೊಡುತ್ತಿಲ್ಲ. ಅಕಾಡೆಮಿಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಿಲ್ಲ ಎಂದ ಅವರು, ಹಣ ಬಿಡುಗಡೆ ಮಾಡದ ಕಾರಣ ಪ್ರತಿ ಜಿಲ್ಲೆಯಲ್ಲೂ ಅನೈತಿಕ ಚುಟುವಟಿಕೆಯಿಂದ ಕೂಡಿವೆ ಎಂದರು.
ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ. ಸರಕಾರದಿಂದ ಕೋಟಿ ಕೋಟಿ ಹಣ ಬಿಡುಗಡೆಯಾದರೂ ಸಹ ನಿಮ್ಮ ಭ್ರಷ್ಟಾಚಾರಕ್ಕೆ ಹೋಗುತ್ತದೆ ಎಂದು ಹರಿಹಾಯ್ದರು.