ಅಹಮದಾಬಾದ್: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹಾಗೂ ಕುಟುಂಬದ ಸದಸ್ಯರು ಮಂಗಳವಾರ(ನವೆಂಬರ್ 15)ದಿಂದ ನಾಪತ್ತೆಯಾಗಿದ್ದಾರೆ. ಗುಜರಾತ್ ನ ಆಪ್ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು ಬಿಜೆಪಿ ಅಪಹರಿಸಿದೆ ಎಂದು ಮನೀಶ್ ಸಿಸೋಡಿಯಾ ಬುಧವಾರ ಆರೋಪಿಸಿದ್ದಾರೆ.
ಇದನ್ನೂ ಓದಿ:ಶಿರ್ವ: ತಂತಿ ಬೇಲಿಗೆ ಸಿಲುಕಿ ಬಿದ್ದ ಚಿರತೆ, ಅರಣ್ಯಾಧಿಕಾರಿಗಳು ದೌಡು
ಕಾಂಚನ್ ಜರಿವಾಲಾ ಅವರು ಗುಜರಾತ್ ನ ಪೂರ್ವ ಸೂರತ್ ನ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಭೀತಿ ಆವರಿಸಿದೆ. ಇದರಿಂದಾಗಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯನ್ನು ಅಪಹರಿಸಿದೆ ಎಂದು ಸಿಸೋಡಿಯಾ ದೂರಿದ್ದಾರೆ.
ಮಂಗಳವಾರ ಕಾಂಚನ್ ಜರಿವಾಲಾ ಅವರು ನಾಮಪತ್ರ ಪರಿಶೀಲನೆಗಾಗಿ ತೆರಳಿದ್ದರು. ನಾಮಪತ್ರ ಪರಿಶೀಲನೆ ಬಳಿಕ ಹೊರಬಂದಾಗ ಅವರನ್ನು ಮತ್ತು ಕುಟುಂಬ ಸದಸ್ಯರನ್ನು ಬಿಜೆಪಿ ಗೂಂಡಾಗಳು ಅಪಹರಿಸಿದ್ದು, ಈಗ ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ ಎಂಬುದಾಗಿ ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ತಿಳಿಸಿದ್ದಾರೆ.
Related Articles
ಇದು ಅಪಾಯಕಾರಿ ಬೆಳವಣಿಗೆ. ಇದೊಂದು ಕೇವಲ ಅಭ್ಯರ್ಥಿಯ ವಿಷಯಲ್ಲ, ಪ್ರಜಾಪ್ರಭುತ್ವದ ಅಪಹರಣ ಎಂದು ಮನೀಶ್ ಆರೋಪಿಸಿದ್ದಾರೆ. ಈ ಘಟನೆ ಬಗ್ಗೆ ಆಮ್ ಆದ್ಮಿ ಪಕ್ಷದ ಮುಖಂಡರು ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ.