Advertisement

ಸೊಪ್ಪಿನ ಎಎಪಿ ಗ್ರಾಮೀಣ ಜಿಲ್ಲಾಧ್ಯಕ್ಷ

08:45 PM Jan 16, 2022 | Team Udayavani |

ಹುಬ್ಬಳ್ಳಿ: ಆಮ್‌ಆದ್ಮಿ ಪಕ್ಷ(ಎಎಪಿ) ಗ್ರಾಮೀಣ ಜಿಲ್ಲಾಧ್ಯಕ್ಷರನ್ನಾಗಿ ಕಳಸಾ-ಬಂಡೂರಿ ಸಮನ್ವಯ ಸಮಿತಿ ಸಂಚಾಲಕ ವಿಕಾಸ ಸೊಪ್ಪಿನ ಅವರನ್ನು ನೇಮಕ ಮಾಡಲಾಗಿದೆ.

Advertisement

ಅವರ ರೈತಪರ ಹೋರಾಟ ಮತ್ತು ರೈತಪರ ಕಾಳಜಿ ಗುರುತಿಸಿ ಎಎಪಿ ನೂತನ ಜಿಲ್ಲಾಧ್ಯಕ್ಷ ಅನಂತಕುಮಾರ ಬುಗಡಿ ಅವರ ನೇತೃತ್ವದಲ್ಲಿ ಎಲ್ಲ ಜಿಲ್ಲಾ ಮುಖಂಡರ ಶಿಫಾರಸು ಮೇರೆಗೆ ಪಕ್ಷದ ರಾಜ್ಯ ಉಸ್ತುವಾರಿ ರೊಮಿ ಭಾಟಿ ಮತ್ತು ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ ಜೈನ ಅವರ ಸಮ್ಮುಖದಲ್ಲಿ ವಿಕಾಸ ಸೊಪ್ಪಿನ ಅವರನ್ನು ನೇಮಕ ಮಾಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರೊಮಿ ಭಾಟಿ ಅವರು, ಗ್ರಾಮೀಣ ಜನರ ಸಮಸ್ಯೆಗಳ ವಿರುದ್ಧ ತಮ್ಮ ಹೋರಾಟವನ್ನು ತೀವ್ರಗತಿಯಲ್ಲಿ ಮುಂದುವರಿಸಿ ಬರುವ ಬೇಸಿಗೆ ಮೊದಲು ಕಳಸಾ-ಬಂಡೂರಿ ಯೋಜನೆ ಕಾರ್ಯಾರಂಭ ಮಾಡಲು ಒತ್ತು ಕೊಡಬೇಕು ಎಂದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ವಿಕಾಸ ಸೊಪ್ಪಿನ, ಧಾರವಾಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಆಮ್‌ ಆದ್ಮಿ ಪಕ್ಷದ ಅಭಿಮಾನಿಗಳಿದ್ದಾರೆ. ಅಂಥವರನ್ನು ಗುರುತಿಸಿ ಪಕ್ಷಕ್ಕೆ ಕರೆತಂದು ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ರೈತರ, ಮಹಿಳೆಯರ ಮತ್ತು ಸಾಮಾನ್ಯ ಜನತೆಯ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಚಳವಳಿ ಕಟ್ಟಿ ಪಕ್ಷ ಬೆಳೆಸುವ ಕಾರ್ಯವನ್ನು ಮುಂಬರುವ ದಿನಗಳಲ್ಲಿ ಮಾಡಲಾಗುವುದು ಎಂದು ಹೇಳಿದರು.

ಶಶಿಕುಮಾರ ಸುಳ್ಳದ, ಪ್ರವೀಣಕುಮಾರ ನಡಕಟ್ಟಿನ, ಮಲ್ಲಪ್ಪ ತಡಸದ, ಸಂತೋಷ ಮಾನೆ, ಮಲ್ಲಿಕಾರ್ಜುನಯ್ಯ ಹಿರೇಮಠ, ಸದಾನಂದ ಹೊಳೆಣ್ಣವರ, ಹಸನಸಾಬ್‌ ಇನಾಂದಾರ, ಶಿವಕುಮಾರ ಬಾಗಲಕೋಟೆ, ಮಹೆಬೂಬ್‌ ಹೊಸಮನಿ, ಡೇನಿಯಲ್‌ ಐಕೋಸ್‌ ಇನ್ನಿತರರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next