Advertisement

BJP ಕೇಂದ್ರ ಕಚೇರಿ ಬಳಿ ಎಎಪಿ ಬೃಹತ್ ಪ್ರತಿಭಟನೆ; ಗೋಪಾಲ್ ರಾಯ್, ಅತಿಶಿ ಭಾಗಿ

06:54 PM Jun 29, 2024 | Team Udayavani |

ಹೊಸದಿಲ್ಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ ಖಂಡಿಸಿ ಬಿಜೆಪಿ ಪ್ರಧಾನ ಕಚೇರಿಯ ಮುಂದೆ ಆಮ್ ಆದ್ಮಿ ಪಕ್ಷ ಶನಿವಾರ ಪ್ರತಿಭಟನೆ ನಡೆಸಿತು.

Advertisement

ಪ್ರತಿಭಟನೆಯಲ್ಲಿ ಸಚಿವರಾದ ಗೋಪಾಲ್ ರಾಯ್, ಅತಿಶಿ, ಆಮ್ ಆದ್ಮಿ ಪಕ್ಷದ  ಸಂಸದರು, ಶಾಸಕರು, ಕೌನ್ಸಿಲರ್‌ಗಳು ಮತ್ತು ಪ್ರಮುಖರು ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತಿಭಟನಾಕಾರರು ಕೇಂದ್ರೀಯ ಸಂಸ್ಥೆಗಳ ದುರುಪಯೋಗ ಮತ್ತು ಸರ್ವಾಧಿಕಾರವನ್ನು ಕೊನೆಗಾಣಿಸುತ್ತೇವೆ ಎಂಬ ಫಲಕಗಳನ್ನು ಸಹ ಹಿಡಿದುಕೊಂಡಿದ್ದರು. ಪ್ರತಿಭಟನಾಕಾರರು ಡಿಡಿಯು ಮಾರ್ಗದಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಬಳಿಯ ಎಎಪಿ ಕಚೇರಿಯಲ್ಲಿ ಜಮಾಯಿಸಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಗೆ ಯಾವುದೇ ಅನುಮತಿ ತೆಗೆದುಕೊಳ್ಳದ ಕಾರಣ ಬಿಜೆಪಿ ಕೇಂದ್ರ ಕಚೇರಿಯತ್ತ ಮೆರವಣಿಗೆ ನಡೆಸುವುದನ್ನು ತಡೆಯಲು ವ್ಯವಸ್ಥೆ ಮಾಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಪ್ರತಿಭಟನಾಕಾರರನ್ನು ತಡೆಯಲು ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಸ್ಥಳದಲ್ಲಿ ಅರೆಸೇನಾ ಪಡೆ ಸಿಬಂದಿ ಮತ್ತು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಪರಿಸರ ಸಚಿವ ಗೋಪಾಲ್ ರಾಯ್ ಮಾತನಾಡಿ ‘ನಮ್ಮ ಸಿಎಂ ಮತ್ತು ಸಚಿವರು ನಕಲಿ ಪ್ರಕರಣಗಳಲ್ಲಿ ಜೈಲು ಪಾಲಾಗಿದ್ದಾರೆ. ಇದು ಬಿಜೆಪಿ ಸರ್ಕಾರದ ಷಡ್ಯಂತ್ರ. ಸತ್ಯಾಂಶವೂ ಹೊರಬಿದ್ದಿದೆ. ಸಿಎಂಗೆ ಟ್ರಯಲ್ ಕೋರ್ಟ್ ಜಾಮೀನು ನೀಡಿದೆ. ಸಿಎಂ ವಿರುದ್ಧ ಯಾವುದೇ ಪುರಾವೆ ಇಲ್ಲ ಎಂದು ವಿಚಾರಣಾ ನ್ಯಾಯಾಲಯ ಹೇಳಿದ ಬಳಿಕ ಇಡಿ ಆದೇಶದ ಪ್ರತಿಯನ್ನು ತೆಗೆದುಕೊಳ್ಳದೆ ಹೈಕೋರ್ಟ್‌ಗೆ ಹೋಗಿದೆ.ಇದು ದೆಹಲಿ ಸರ್ಕಾರ ಮತ್ತು ಎಎಪಿಯನ್ನು ನಾಶಮಾಡುವ ಅಭಿಯಾನವಾಗಿದೆ. ಶೀಘ್ರದಲ್ಲೇ ನ್ಯಾಯಾಲಯದಿಂದ ಆಶಾದಾಯಕ ಫಲಿತಾಂಶಗಳನ್ನು ಪಡೆಯುತ್ತೇವೆ” ಎಂದಿದ್ದಾರೆ.

Advertisement

ಇದನ್ನೂ ಓದಿ: Excise Policy Case: ಅರವಿಂದ್‌ ಕೇಜ್ರಿವಾಲ್‌ ಗೆ 14 ದಿನಗಳ ನ್ಯಾಯಾಂಗ ಬಂಧನ : ಕೋರ್ಟ್

ನ್ಯಾಯಾಂಗ ಬಂಧನವನ್ನು ಕೋರಲು ಯಾವುದೇ ಆಧಾರವಿಲ್ಲ

ಅಬಕಾರಿ ನೀತಿ ವಿಚಾರಕ್ಕೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಜುಲೈ 12 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು,ಈ ಕುರಿತು ಅವರ ಕುರಿತು ವಕೀಲ ರಿಷಿಕೇಶ್ ಕುಮಾರ್ ಅವರು ಪ್ರತಿಕ್ರಿಯಿಸಿ “ಅರವಿಂದ್ ಕೇಜ್ರಿವಾಲ್ ಅವರ ಮೂರು ದಿನಗಳ ಸಿಬಿಐ ಕಸ್ಟಡಿ ಇಂದು ಅಂತ್ಯಗೊಂಡಿದ್ದರಿಂದ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹೆಚ್ಚಿನ ಪೊಲೀಸ್ ಕಸ್ಟಡಿಗೆ ಕೋರಲಿಲ್ಲ, ಅವರು ನ್ಯಾಯಾಂಗ ಬಂಧನವನ್ನು ಕೋರಿದರು, ಅದನ್ನು ನಾವು ವಿರೋಧಿಸಿದ್ದೇವೆ, ಅವರು ನ್ಯಾಯಾಂಗ ಬಂಧನವನ್ನು ಕೋರಲು ಯಾವುದೇ ಆಧಾರವಿಲ್ಲ ಎಂದರು.

‘ಕೇಜ್ರಿವಾಲ್ ಅವರನ್ನು ಜುಲೈ 12 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ನಾವು ಅರ್ಜಿ ಸಲ್ಲಿಸಿದ್ದೇವೆ ಅವರ ಮಧುಮೇಹ ಔಷಧಗಳು, ಪರೀಕ್ಷಾ ಕಿಟ್‌ಗಳು ಮತ್ತು ಮನೆಯಲ್ಲಿಯೇ ಸಿದ್ದಪಡಿಸಿದ ಆಹಾರವನ್ನು ಒದಗಿಸಲು ನಮ್ಮ ಬೇಡಿಕೆಗಳಿಗೆ ನ್ಯಾಯಾಲಯವು ಸಮ್ಮತಿಸಿದೆ. ಸೋಮವಾರ ಅಥವಾ ಮಂಗಳವಾರ, ನಾವು ಜಾಮೀನು ಅರ್ಜಿಯನ್ನು ಸಲ್ಲಿಸುತ್ತೇವೆ” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next