ಬೆಂಗಳೂರು: ಅದಾನಿ ಸಮೂಹದ ಅವ್ಯವಹಾರಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಿದೆ ಎಂದು ಆರೋಪಿಸಿ ಎಎಪಿ ಕಾರ್ಯಕರ್ತರು ರಾಜ್ಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ನೇತೃತ್ವದಲ್ಲಿ ಜಗನ್ನಾಥ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಎಎಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಈ ವೇಳೆ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ, ಪ್ರಧಾನಿ ಮೋದಿನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇಕಲ್ಲಿದ್ದಲು, ಗ್ಯಾಸ್, ವಿದ್ಯುತ್, ರಸ್ತೆ, ನೀರು, ವಿಮಾನ ನಿಲ್ದಾಣ, ಬಂದರು ಸೇರಿದಂತೆ ಹಲವು ಕ್ಷೇತ್ರಗಳನ್ನು ಅದಾನಿ ಸಮೂಹದಪಾಲು ಮಾಡಿದೆ. ಇದರಿಂದಾಗಿ ದೇಶದಲ್ಲೀಗ ಆರ್ಥಿಕ ಆತಂಕ ಸಂಕಷ್ಟ ಎದುರಾಗಿದೆ. ಇಡೀ ಪ್ರಕರಣವನ್ನು ತನಿಖೆಗೆ ಆದೇಶಿಸಬೇಕಾಗಿದ್ದಪ್ರಧಾನಿ ಮೋದಿ ಉದ್ಯಮಿ ಪರ ನಿಂತಿದ್ದಾರೆ ಎಂದು ದೂರಿದರು.
ಅದಾನಿ ಆಸ್ತಿ 2014ರಲ್ಲಿ 37,000 ಕೋಟಿ ರೂ. ಆಗಿತ್ತು.2018ರಲ್ಲಿ 59,000 ಕೋಟಿ ರೂ. ಗೆ ಏರಿಕೆಯಾಯಿತು. ಜತೆಗೆ ಇದು 2020ರಲ್ಲಿ2.5 ಲಕ್ಷ ಕೋಟಿ ರೂ.ಗೆ ತಲುಪಿತು. 2022ರಲ್ಲಿ13 ಲಕ್ಷ ಕೋಟಿ ರೂ.ಗೂ ಅಧಿಕವಾಗಿದೆ. ಒಬ್ಬ ವ್ಯಕ್ತಿಗೆ ಎಲ್ಲಾ ಸಂಪನ್ಮೂಲಗಳನ್ನು ನೀಡುವಮೂಲಕ ಪ್ರಧಾನಿ ಮೋದಿ ಅವರು ಉದ್ಯಮಿ ಗೌತಮ್ ಅದಾನಿಯನ್ನು ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿದ್ದಾರೆ ಎಂದು ಟೀಕಿಸಿದರು.
ಎಎಪಿ ರಾಜ್ಯಕಾರ್ಯಾಧ್ಯಕ್ಷಮೋಹನ್ ದಾಸರಿ, ಎಎಪಿಯ ಬೆಂಗಳೂರು ನಗರ ಅಧ್ಯಕ್ಷ ಸತೀಶ್ ಕುಮಾರ್, ಚನ್ನಪ್ಪಗೌಡನೆಲ್ಲೂರು, ಜಗದೀಶ್ ವಿ ಸದಂ ಸೇರಿದಂತೆ ಮತ್ತಿತರರು ಇದ್ದರು.