ನವದೆಹಲಿ: ಸವಲತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮೇಲ್ಮನೆಯಿಂದ ಅಮಾನತುಗೊಂಡಿದ್ದ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರ ಅಮಾನತ್ತನ್ನು ರಾಜ್ಯಸಭೆ ಸೋಮವಾರ ಹಿಂಪಡೆದಿದೆ.
ಪಂಜಾಬ್‌ನ ರಾಜ್ಯಸಭಾ ಸಂಸದ ಚಡ್ಡಾ ಅವರನ್ನು ಆಗಸ್ಟ್ 11 ರಂದು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿಶೇಷ ಹಕ್ಕು ಉಲ್ಲಂಘನೆಯ ಆರೋಪದ ಮೇಲೆ ಅಮಾನತುಗೊಳಿಸಲಾಗಿತ್ತು.
ಚಡ್ಡಾ ಅವರು ತಮ್ಮ ಪತ್ರದಲ್ಲಿ ಸಹಿಯನ್ನು ತೋರಿಸಿರುವ ಐವರು ಸಂಸದರು ತಮ್ಮ ಒಪ್ಪಿಗೆಯಿಲ್ಲದೆ ದೆಹಲಿ ಸೇವೆಗಳ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವ ಪ್ರಸ್ತಾವನೆಯಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಸ್ತಾವನೆಯನ್ನು ಆಪ್ ಸಂಸದ ರಾಘವ್ ಚಡ್ಡಾ ಮಂಡಿಸಿದ್ದರು. ಈ ಪ್ರಸ್ತಾಪಕ್ಕೆ ಬಿಜೆಪಿಯ ಮೂವರು ಸಂಸದರು ವಿರೋಧ ವ್ಯಕ್ತಪಡಿಸಿದ್ದರು.
ಇದೀಗ ಚಳಿಗಾಲದ ಅಧಿವೇಶನದ ಮೊದಲ ದಿನವೇ ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಅವರು ಮಂಡಿಸಿದ ಮನವಿಯ ಮೇರೆಗೆ ಸಂಸದ ರಾಘವ್ ಚಡ್ಡಾ ಅವರ ಅಮಾನತನ್ನು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಹಿಂಪಡೆದಿದ್ದಾರೆ.
ಅಮಾನತು ಹಿಂಪಡೆಯುತ್ತಿದ್ದಂತೆ ಸುಪ್ರೀಂ ಕೋರ್ಟ್ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: Mizoram Result; ಸಮೀಕ್ಷೆ ತಲೆಕೆಳಗಾಗಿಸಿದ ಲಲ್ದುಹೊಮಾ; ಝಡ್ ಪಿಎಂ ಪಕ್ಷಕ್ಕೆ ಸರಳ ಬಹುಮತ