Advertisement

ಆ್ಯಪ್ ಮಿತ್ರ: ಸ್ಮಾರ್ಟ್‌ ಪ್ಲಾಂಟ್‌

04:58 AM Jun 08, 2020 | Lakshmi GovindaRaj |

ಸಸ್ಯ ಜಗತ್ತಿನ ಕುರಿತು ಆಸಕ್ತಿ ಇರುವವರಿಗಾಗಿ ಹೇಳಿಮಾಡಿಸಿದ ಆ್ಯಪ್‌ ಇದು. ಯಾವುದೇ ಸಸ್ಯದ ಕುರಿತಾದ ಮಾಹಿತಿಯನ್ನು ಈ ಆ್ಯಪ್‌ ನೀಡುತ್ತದೆ. ಅದರ ಹೆಸರು, ಪ್ರಭೇದ ಮತ್ತಿತರ ಇತ್ಯೋಪರಿ ಅಷ್ಟೇ ಯಾಕೆ? ಎಷ್ಟು ಪ್ರಮಾಣದಲ್ಲಿ  ನೀರನ್ನು ಹಾಕಬೇಕು, ಗಿಡವನ್ನು ಎಂಥಾ ಜಾಗದಲ್ಲಿ ಬೆಳೆಸಬೇಕು ಎಂಬುದನ್ನೂ ತಿಳಿಸಿಕೊಡುತ್ತದೆ. ಇದರಲ್ಲಿ ಅಡಕವಾಗಿರುವ ಮತ್ತೂಂದು ಆಕರ್ಷಕ ಸವಲತ್ತು ಎಂದರೆ, ಫೋಟೊ ಕ್ಲಿಕ್ಕಿಸಿ ಹುಡುಕುವುದು. ಉದಾಹರಣೆಗೆ, ದಾರಿಯಲ್ಲಿ ನಡೆದು ಹೋಗುತ್ತಿರುವಾಗ, ಯಾವುದೋ ಒಂದು ಸಸ್ಯ ಕಣ್ಣಿಗೆ ಬೀಳುತ್ತದೆ ಎಂದಿಟ್ಟುಕೊಳ್ಳೋಣ.

Advertisement

ಬಳಕೆದಾರ ಈ ಆ್ಯಪ್‌ ತೆರೆದು, ಅದರಲ್ಲಿನ ಕ್ಯಾಮೆರ ಆಯ್ಕೆಯ ಸಹಾಯದ ಮೂಲಕ ಆ ಸಸ್ಯದ ಫೋಟೊ ಕ್ಲಿಕ್ಕಿಸಿದರೆ ಸಾಕು. ಅದರ  ಬಗೆಗಿನ ಎಲ್ಲಾ ಮಾಹಿತಿಯನ್ನೂ ಈ ಆ್ಯಪ್‌ ಕ್ಷಣಮಾತ್ರದಲ್ಲಿ ಒದಗಿಸಿಬಿಡುತ್ತದೆ. ಹೀಗೆ ಹುಡುಕಿದ ಸಸ್ಯದ ಕುರಿತಾದ ಮಾಹಿತಿಯನ್ನು ಸೇವ್‌ ಕೂಡಾ ಮಾಡಿಕೊಳ್ಳಬಹುದು. ಮುಂದೆ ಯಾವತ್ತಾದರೂ ನೀವು ಹುಡುಕಿದ ಸಸ್ಯಗಳ  ಪಟ್ಟಿಯನ್ನು ಮತ್ತೂಮ್ಮೆ ತಿರುವಿ ಹಾಕಬಹುದು. ಕಾಲಕ್ಕೆ, ತಿಂಗಳಿಗೆ ತಕ್ಕಂತೆ ಆಯಾ ಗಿಡಗಳನ್ನು ಬೆಳೆಸುವ ಬಗೆಗೆ ಸಲಹೆ- ಸೂಚನೆಗಳನ್ನೂ ಈ ಆ್ಯಪ್‌ ನೀಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next